ಖಿನ್ನತೆಗೊಳಗಾಗಿದ್ದ ಬಾಲಿವುಡ್​​ ಡ್ಯಾನ್ಸರ್​ ಅಭಿಜೀತ್​ ಶಿಂಧೆ ನೇಣಿಗೆ ಶರಣು..!

ಮುಂಬೈ : ಖಿನ್ನತೆಗೊಳಗಾಗಿದ್ದ ಬಾಲಿವುಡ್​ನ ಖ್ಯಾತ ನೃತ್ಯಸಂಯೋಜಕ ಅಭಿಜೀತ್​ ಶಿಂಧೆ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಾಲಿವುಡ್​ನ ದೊಡ್ಡ ದೊಡ್ಡ ಸ್ಟಾರ್ಸ್​ ಜೊತೆ ಕೆಲಸ ಮಾಡಿದ್ದ  ಅಭಿಜೀತ್​ ಬಹು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಅಭಿಜೀತ್  ಮತ್ತು ಅವರ ಹೆಂಡತಿ ಮಧ್ಯೆ ಮನಸ್ತಾಪವಿದ್ದು, ಹೆಂಡತಿ ಮನೆಬಿಟ್ಟು ​ ಹೋಗಿದ್ದರು, ಆದರೆ ಅಭಿಜೀತ್​ ತಮ್ಮ ಮಗಳನ್ನು ನೋಡಲು ಹೋದಾಗ ಅವರ ಹೆಂಡತಿ ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.

Image result for abhijit shinde

ಇಂತಹ ಕೆಲ  ವೈಯಕ್ತಿಕ ಕಾರಣದಿಂದ ನೊಂದು ಖಿನ್ನತೆಗೆ ಒಳಗಾಗಿದ್ದ 32ವರ್ಷದ ಬಾಲಿವುಡ್​ ನೃತ್ಯ ಸಂಯೋಜಕ ಅಭಿಜೀತ್​ ನಿನ್ನೆ  ಫ್ಯಾನ್​ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com