Asian Games : ರೋಯಿಂಗ್ : ಭಾರತದ ಮಡಿಲಿಗೆ 1 ಚಿನ್ನ ಹಾಗೂ 2 ಕಂಚಿನ ಪದಕ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ 6ನೇ ದಿನವಾದ ಶುಕ್ರವಾರ ಭಾರತದ ಮಡಿಲಿಗೆ ಒಂದು ಚಿನ್ನ ಹಾಗೂ ಎರಡು ಕಂಚಿನ ಪದಕಗಳು ಒಲಿದಿವೆ. ಪುರುಷರ ಲೈಟ್ ವೇಯ್ಟ್ ಸಿಂಗಲ್ಸ್ ಸ್ಕಲ್ಸ್ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದ ಭಾರತದ ದುಷ್ಯಂತ್ ಕಂಚಿನ ಪದಕ ಜಯಿಸಿದರು. ನಂತರ ಲೈಟ್ ವೇಯ್ಡ್ ಡಬಲ್ ಸ್ಕಲ್ಸ್ ವಿಭಾಗದ ಸ್ಪರ್ಧೆಯಲ್ಲಿ ರೋಹಿತ್ ಕುಮಾರ್ ಹಾಗೂ ಭಗವಾನ್ ಸಿಂಗ್ ಕಂಚನ್ನು ಗೆದ್ದುಕೊಂಡರು.

ಪುರುಷರ ಕ್ವಾಡ್ರಪಲ್ ಸ್ಕಲ್ ವಿಭಾಗದ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಒಲಿಯಿತು. ಸವರ್ನ್ ಸಿಂಗ್, ದತ್ತು ಭೋಕನಾಲ್, ಓಂಪ್ರಕಾಶ್ ಹಾಗೂ ಸುಖಮೀತ್ ಸಿಂಗ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 6 ಬಂಗಾರ, 5 ಬೆಳ್ಳಿ ಹಾಗೂ 13 ಕಂಚು ಒಟ್ಟು 24 ಪದಕಗಳನ್ನು ಗೆದ್ದಿದ್ದು 5ನೇ ಸ್ಥಾನದಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com