Watch : ‘ರಾಜು ಜೇಮ್ಸ್​ ಬಾಂಡ್​’ ಚಿತ್ರದ ಟೀಸರ್​ ರಿಲೀಸ್​ : ಹೊಸ ಅವತಾರದಲ್ಲಿ ಗುರುನಂದನ್​

ಫಸ್ಟ್​ ರ್ಯಾಕ್​ ರಾಜು , ರಾಜು ಕನ್ನಡ ಮಿಡಿಯಂ ಚಿತ್ರಗಳಲ್ಲಿ ಅಭಿನಯಿಸಿದ ರಾಜು ಎಂದೇ ಖ್ಯಾತಿ ಪಡೆದಿರುವ ಗುರುನಂದನ್​ರ ಮುಂದಿನ ಚಿತ್ರ ರಾಜು ಜೇಮ್ಸ್​ ಬಾಂಡ್​ ಟೀಸರ್​​ ರಿಲೀಸ್​​ ಆಗಿದ್ದು, ಸಖತ್​ ಸೌಂಡ್​ ಮಾಡತ್ತಿದೆ.

Video: 'ಫಸ್ಟ್​ ರ‍್ಯಾಂಕ್​ ರಾಜು' ಈಗ 'ರಾಜು ಜೇಮ್ಸ್​ಬಾಂಡ್': ಬಿಡುಗಡೆಯಾಯಿತು ಸ್ಯಾಂಡಲ್​ವುಡ್​ನ ಬಾಂಡ್​ ಟೀಸರ್​

ಗುರುನಂದನ್​ಗೆ ರಾಜು ಅನ್ನೋ ನೇಮ್​ ತುಂಬಾ ಲಕ್ಕಿ, ಇವರ ಅಭಿನಯದ 2 ಚಿತ್ರಗಳಲ್ಲೂ ರಾಜು ಎಂಬ ಹೆಸರು ಇದ್ದು, ಈಗಿನ ಚಿತ್ರಕ್ಕೂ ರಾಜು ಅನ್ನೋ ಶೀಷಿಕೆ ಇದೆ. ಹೌದು ಗುರುನಂದನ್​ ಅಲಿಯಾನ್​ ರಾಜುನ ಮುಂದಿನ ಚಿತ್ರ ರಾಜು ಜೇಮ್ಸ್​ಬಾಂಡ್ ​. ಸಿನಿಮಾದ ಫಸ್ಟ್​ಲುಕ್ ಟೀಸರ್ ರಿಲೀಸಾಗಿದ್ದು, ಈ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ನಿರ್ದೇಶನ,  ಮನೋಹರ್ ಜೋಶಿ ಅವರ ಛಾಯಾಗ್ರಹಣ, ಸಂಗೀತ ಅನೂಪ್ ಸೀಳಿನ್ ಮತ್ತು ಅಕ್ಷಯ್ ಪಿ. ರಾವ್ ಸಂಕಲನವಿದ್ದು, ರಾಜುಗೆ ನಾಯಕಿಯಾಗಿ ಮೃದುಲಾ ಆಯ್ಕೆಯಾಗಿದ್ದಾರೆ.

ಒಂದು ನಿಮಿಷ ಮೂರು ಸೆಕೆಂಡ್​ನ ಟೀಸರ್​ ಆರಂಭವಾಗುವುದೇ ಅಣ್ಣಾವರ ಹಳೇ ಸಿನಿಮಾದ ದೃಶ್ಯದಿಂದ ಶುರುವಾಗುತ್ತದೆ. ಚಿಕ್ಕಂದಿನಿಂದ ಡಾ. ಚಿತ್ರವನ್ನು  ನೋಡುತ್ತಲೇ ಬೆಳೆಯುವ ಹುಡುಗನ ಕಥೆಯೇ ಈ ‘ರಾಜು ಜೇಮ್ಸ್​ಬಾಂಡ್​’ ಸಿನಿಮಾ ಎಂದು  ಟೀಸರ್​ನಿಂದ ತಿಳಿಯುತ್ತದೆ.

 

 

Leave a Reply

Your email address will not be published.

Social Media Auto Publish Powered By : XYZScripts.com