ಮೈತ್ರಿ ಸರ್ಕಾರ ಯಶಸ್ವಿಯಾಗಿ 5 ವರ್ಷಗಳನ್ನು ಪೂರೈಸಲಿದೆ : ಸಚಿವ ರಾಜಶೇಖರ ಪಾಟೀಲ್

ಯಾದಗಿರಿ : ಯಾದಗಿರಿಯಲ್ಲಿ ಮುಜರಾಯಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ‘ ನಾನು ಸಚಿವನಾಗಿ ಮುಜರಾಯಿ ಇಲಾಖೆಯಿಂದ 12 ಕೋಟಿ 38 ಲಕ್ಷ ರೂಪಾಯಿ ತಗೆದುಕೊಂಡಿದ್ದೇನೆ. ಇದರಲ್ಲಿ ಸಿಎಂ ಅವರದು ಏನಿಲ್ಲ, ನಾನೇ ಸ್ವತಃ ಕೆಲವು ದೇವಸ್ಥಾನಗಳಿಂದ ಹಣ ಪಡೆದಿದ್ದೇನೆ ‘ ಎಂದಿದ್ದಾರೆ.

‘ ಕುಕ್ಕೆ ಸುಬ್ರಹ್ಮಣ್ಯ 3 ಕೋಟಿ, ಚಾಮುಂಡೇಶ್ವರಿ 1 ಕೋಟಿ ಇತರ ದೇವಸ್ಥಾನ ದಿಂದ 8.38 ಕೋಟಿ ಕಲೆಕ್ಟ್ ಮಾಡಿಕೊಂಡಿದ್ದೇವೆ. ನಾಳೆ, ಸಿಎಂ ಪರಿಹಾರ ನಿಧಿ ಗೆ 12 ಕೋಟಿ 38 ಲಕ್ಷ ರೂಪಾಯಿ ಜಮೆ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಇಡೀ ರಾಜ್ಯವೆ ನಾನಕಡೆ ಸಂಗ್ರಹಣ ಮಾಡಿ ನಿರಾಶ್ರಿತರಿಗೆ ನೀಡ್ತಿರುವಾಗ, ನಾವು ಕೂಡ ಆ ಜನರಿಗಾಗಿ ಕೊಡ್ತಿದ್ದೇವೆ ಅಷ್ಟೆ. ಸಿಎಂ ಅವರು ಗುಡಿ ಗುಂಡಾರ ಕ್ಕೂ ಭೇಟಿ ನೀಡ್ತಾರೆ, ಸೇರಿದಂತೆ ಕೊಡಗಿಗೂ ಹೋಗ್ತಾರೆ ‘ ಎಂದಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ವಿಚಾರ, ಶ್ರಾವಣ ಮಾಸದ ನಂತರ ಸರ್ಕಾರದ ಬಿದ್ದು ಯಡಿಯೂರಪ್ಪ ಸಿಎಂ ಆಗ್ತಾರೆ ಎನ್ನುವುದಕ್ಕೆ ಸಚಿವರ ಪ್ರತಿಕ್ರಿಯೆ ನೀಡಿದ್ದು, ‘ ಅವರ ಹೇಳಿಕೆ ಸುದ್ದ ಸುಳ್ಳು, ಸಮ್ಮಿಶ್ರ ಸರ್ಕಾರ ಬಹಳ ಗಟ್ಟಿಯಾಗಿದೆ. ಐದು ವರ್ಷಗಳ ಕಾಲ ಯಶಸ್ವಿಯಾಗಿ ಸರ್ಕಾರ ಪೂರೈಸುತ್ತೆ. ಸರ್ಕಾರ ರಚನೆಯಾಗಿ ನಾಲ್ಕೈದು ತಿಂಗಳಲ್ಲಿ ಈ ರೀತಿ ಮಾತು ಸರಿಯಲ್ಲ ಕಾದು ನೋಡಿ ‘ ಎಂದು ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com