ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ : ಸಂಸದ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ‘ ಇಂದಿರಾಗಾಂಧಿ ಅಸ್ಥಿ ಹಿಡಿದು ರಾಜೀವ್ ಗಾಂಧಿ ಮತ ಕೇಳಿದ್ದರು ‘ ಎಂದು ಹುಬ್ಬಳ್ಳಿಯಲ್ಲಿ ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ‘ ನಾವು ಅಟಲ್ ಬಿಹಾರಿ ವಾಜಪೇಯಿ ಅಸ್ಥಿ ಇಟ್ಟುಕೊಂಡು ವೋಟು ಕೇಳಲು ಹೊರಟಿಲ್ಲ. ಕಾಂಗ್ರೆಸ್ ನವರಿಗೆ ನಾಚಿಗೆ ಬರಬೇಕು, ಈಗ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ‘ ಎಂದು ಹೇಳಿದ್ದಾರೆ.

‘ ರಾಹುಲ್ ಗಾಂಧಿ ಅಂತಾ ಅಪ್ರಬುದ್ಧ ನಾಯಕ ಪಾರ್ಟಿಯಲ್ಲಿರುವಾಗ ಈ ರೀತಿ ಆಗುತ್ತೆ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನಿಸರಿಸುತ್ತಿದೆ. ಐಸಿಎಸ್ ಉಗ್ರ ಸಂಘಟನೆ ಹುಟ್ಟಿಕೊಳ್ಳಲು ನಿರುದ್ಯೋಗ ಕಾರಣ ಎಂದು ರಾಹುಲ್ ಗಾಂಧಿ ‌ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಹುಚ್ಚು ಹುಚ್ಚು ಹೇಳಿಕೆ ನೀಡುತ್ತಿದ್ದಾರೆ, ಅವರ ತಲೆಯಲ್ಲಿ ಮೆದುಳು ಇಲ್ಲ ‘ ಎಂದಿದ್ದಾರೆ.

‘ ರಾಹುಲ್ ಪೆದ್ದ ಪೆದ್ದಾಗಿ ಪೆದ್ದುತನದಿಂದ ಮಾತನಾಡುತ್ತಿದ್ದಾರೆ. ಅವರು ಮಾತನಾಡುತ್ತಿದ್ದಾರೆಂದು ದಿನೇಶ್ ಗುಂಡೂರಾವ್ ಮಾತನಾಡುತ್ತಿದ್ದಾರೆ. ನಮ್ಮ ವಿರೋಧಿ ದೇಶಗಳಿಗೆ ಏನೂ ಹೇಳಿಕೆ ಬೇಕೊ ಆ ರೀತಿ ಹೇಳಿಕೆಗಳನ್ನ ಕಾಂಗ್ರೆಸ್‌ನವರು ಕೊಡುತ್ತಿದ್ದಾರೆ. ರಾಹುಲ್ ಗಾಂಧಿ ಹುಚ್ಚು ಹುಚ್ಚು ಮಾತನಾಡುತ್ತಿದ್ದಾರೆ, ಅದಕ್ಕೆ ಗುಂಡೂರಾವ್ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಲೀಡರ್ ಹುಚ್ಚು ಆದಾಗ ಅವರು ಬೆಂಬಲಿಗರು ಹುಚ್ಚು ಆಗಲೇಬೇಕಲ್ಲಾ..? ‘ ಎಂದು ವ್ಯಂಗ್ಯ ಮಾಡಿದ್ದಾರೆ.

‘ ಕಾಂಗ್ರೆಸ್ ಹಿಂದು ವಿರೋಧಿ ಮಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ 44 ಸೀಟುಗಳನ್ನು ಗೆದ್ದಿದ್ದಾರೆ. ಮುಂದೆ ಇದೇ ರೀತಿಯಾದ್ರೇ ಕಾಂಗ್ರೆಸ್ ಅನ್ನುವ ಹೆಸರು ಈ ದೇಶದಲ್ಲಿ ಇರುವುದಿಲ್ಲ ‘ ಎಂದರು.

Leave a Reply

Your email address will not be published.