Watch : ನಮ್ಮ ಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಮಾಡಿ : ಸಿಎಂಗೆ ಕೈಮುಗಿದು ಬೇಡಿಕೊಂಡ ಶಾಸಕ..!

ಚಿಕ್ಕಮಗಳೂರು :  ವರುಣನ ಆರ್ಭಟಕ್ಕೆ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಉಂಟಾಗಿರುವ ಅತಿವೃಷ್ಟಿ ಪರಿಶೀಲನೆ ನಡೆಸಲು ಗ್ರಾಮಕ್ಕೆ ಬಂದು ಗ್ರಾಮವಾಸ್ತವ್ಯ  ನಡೆಸುವಂತೆ ಸಿಎಂ ಕುಮಾರಸ್ವಾಮಿಗೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ  ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

Image result for ಅತಿವೃಷ್ಟಿ ಮೂಡಿಗೆರೆ‘

ಮೂಡಿಗೆರೆ ಪರಿಸ್ಥಿತಿ ಬಗ್ಗೆ ಫೇಸ್​ ಬುಕ್​ ಪೇಜ್​ನಲ್ಲಿ ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ  ಸಿಎಂಗೆ ಮನವಿ ಮಾಡಿದ್ದು ಹೀಗೆ,  ಸಿಎಂ ಕುಮಾರಸ್ವಾಮಿಯವರೇ ನಿಮಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ, ಕೊಡಗು ಸಂತ್ರಸ್ತರಿಗೆ ನೀವು ಶಕ್ತಿ ಮೀರಿ ಕೆಲಸ ಮಾಡಿದ್ದೀರಿ ನಿಮ ಧನ್ಯವಾದಗಳು, ಆದರೆ ಚಿಕ್ಕಮಂಗಳೂರಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಅಪಾರ ನಷ್ಟವಾಗಿದೆ, ರೈತರು ಬೆಳೆದಿರುವ ಬೆಳೆಗಳು ನಾಶವಾಗಿದೆ, ಹಲವು ಸೇತುವೆಗಳು ಕೊಚ್ಚಿಹೋಗಿದೆ, ಈ ಕಾರಣದಿಂದ ನೀವು ಜಿಲ್ಲೆಗೆ ಭೇಟಿ ನೀಡಿ ಅತಿವೃಷ್ಟಿ ಪರಿಶೀಲನೆ ನಡೆಸಿ ಎಂದು ಫೇಸ್ ಬುಕ್​  ಮೂಲಕ ಸಿಎಂಗೆ ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದಾರೆ.

ಮಾನ್ಯ #ಮುಖ್ಯಮಂತ್ರೀಗಳೇ 3 ತಿಂಗಳಿಂದ #ಸೂರ್ಯನನ್ನೇ ನೋಡದ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಆಗಿರುವ #ಹಾನಿ ನೋಡಲು #ಗ್ರಾಮವಾಸ್ತವ್ಯ ಮಾಡಿನಿಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ

MP Kumara Swamy यांनी वर पोस्ट केले गुरुवार, २३ ऑगस्ट, २०१८

ಅತಿವೃಷ್ಡಿ ಬಗ್ಗೆ ಪರಿಶೀಲನೆ ನಡೆಸಲು ಕ್ಷೇತ್ರಕ್ಕೆ ಬಂದು ಗ್ರಾಮವಾಸ್ತವ್ಯ ನಡೆಸುವಂತೆ  ಶಾಸಕ ಕೈಮುಗಿದು ಶಾಸಕ ಬೇಡಿಕೊಳ್ತಿರೋ ವಿಡಿಯೊ ವೈರಲ್ ಆಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com