ಅಟಲ್​ ಜಿ ಸಾವಿನಲ್ಲೂ ಮೋದಿ ರಾಜಕೀಯ ನಾಟಕವಾಡಿದ್ದಾರೆ : ಮಲ್ಲಿಕಾರ್ಜುನ್​ ಖರ್ಗೆ

ಕಲಬುರ್ಗಿ : ವಾಜಪೇಯಿ ಸಾವಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಟಕ ಬಂದ್​ ಮಾಡಲಿ, ರಾಜಕೀಯ ಪ್ರಚಾರವನ್ನು ಮನದಲ್ಲಿ ಇಟ್ಟುಕೊಂಡು ಅಟಲ್​ ಜಿ ಗೆ ಗೌರವ ಕೊಡುವ ನಾಟಕ ಮಾಡಿದ್ದಾರೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ

Image result for mallikarjun modi

ಅಟಲ್​ ಬಿಹಾರಿ ವಾಜಪೇಯಿ ಒಬ್ಬರು ಅದ್ಭುತ ನಾಯಕ, ಅವರು ಆರೆಸ್ಸೆಸ್ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರೂ ಸರ್ವ ಧರ್ಮ ಸಹಿಷ್ಣುತೆಯಿಂದ ಬದುಕಿದವರು ವಾಜಪೇಯಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾವು ನಮಗೂ ಅಘಾತ ತಂದಿದೆ. ಇದರಲ್ಲಿ ರಾಜಕೀಯ  ಮಾಡಲು ಹೋಗಲ್ಲ, ಆದರೆ ರಾಜಕೀಯ ದೃಷ್ಟಿಯಿಂದ ಮೋದಿಯವರು ಗೌರವ ಕೊಡುವ ನಾಟಕವಾಡುತ್ತಿದ್ದಾರೆ,  ಇದು ಸರಿಯಿಲ್ಲ.  ಅಟಲ್​ ಜೀ ಬದುಕಿದ್ದಾಗ ಪ್ರಧಾನಿ ಮೋದಿ ಎಷ್ಟು ಬಾರಿ ಭೇಟಿ ಮಾಡಿದ್ದಾರೆ..? ರಾಜಧರ್ಮ ಹೇಳಿಕೊಟ್ಟ ಅಡ್ವಾನಿ ನಮಸ್ಕರಿಸಿದ್ರೂ ತಿರುಗಿ ಪ್ರಧಾನಿ ಮೋದಿ ನಮಸ್ಕರಿಸಲಿಲ್ಲ. ದೊಡ್ಡವರು ಎಂಬ ಸೌಜನ್ಯತೆ ಮೋದಿಗೆ ಇಲ್ಲ.  ಎಂದು ಕಲಬುರ್ಗಿಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

Leave a Reply

Your email address will not be published.