Asian Games : ಏರ್ ಪಿಸ್ಟಲ್ : ಕಂಚಿನ ಪದಕ ಜಯಿಸಿದ ಶೂಟರ್ ಹೀನಾ ಸಿಧು

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಒಲಿದಿದೆ. ಶುಕ್ರವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ಟಲ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಹೀನಾ ಸಿಧು ಕಂಚಿನ ಪದಕವನ್ನು ಜಯಿಸಿದ್ದಾರೆ.

ಫೈನಲ್ ನಲ್ಲಿ ಹೀನಾ ಸಿಧು 219.3 ಪಾಯಿಂಟ್ಸ್ ಗಳೊಂದಿಗೆ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಪಡೆದರು. 240.3 ಪಾಯಿಂಟ್ಸ್ ಸ್ಕೋರ್ ಮಾಡಿದ ಚೀನಾ ದೇಶದ ವಾಂಗ್ ಕಿಯಾಂಗ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. 237.6 ಪಾಯಿಂಟ್ಸ್ ಗಳಿಸಿದ ದಕ್ಷಿಣ ಕೊರಿಯಾ ಕಿಮ್ ಮಿನ್ ಜುಂಗ್ ರಜತ ಪದಕವನ್ನು ಜಯಿಸಿದರು.

5ನೇ ಸ್ಥಾನ ಗಳಿಸಿದ ಮತ್ತೋರ್ವ ಭಾರತೀಯ ಶೂಟರ್ ಮನು ಭಾಕರ್ ನಿರಾಸೆ ಅನುಭವಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com