ಬೂಟಾಟಿಕೆ, ಬೊಗಳೇ‌ ದಾಸರ ಪಕ್ಷ ಬಿಜೆಪಿ : ದಿನೇಶ್​ ಗುಂಡೂರಾವ್​ ಕಿಡಿ

ಮೈಸೂರು : ಮೋದಿ ನೇತೃತ್ವದ ಪಕ್ಷದವರು ಬೊಗಳೇ‌ ಬಿಡುತ್ತಾರೆ. ಮೋದಿ ಆಪ್ತ  ಸ್ನೇಹಿತರೇ ದೇಶ ಲೂಟಿ ಮಾಡಿದ್ದಾರೆ. ನೀರವ್ ಮೋದಿ, ಲಲಿತ್ ಮೋದಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಮೋದಿ ಸರ್ಕಾರ ಭಷ್ಟಾಚಾರ ನಡೆಸುತ್ತಿದೆ ಎಂದು ಮೋದಿ ವಿರುದ್ದ ಮೈಸೂರಿನಲ್ಲಿ ದಿನೇಶ್​ ಗುಂಡೂರಾವ್​ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​,  ಮೋದಿ ನೇತೃತ್ವದ ಪಕ್ಷ ಬೂಟಾಟಿಕೆಯದ್ದು, ಸುಳ್ಳಿನ ಆಶ್ವಾಸನೆ ಮತ್ತು ಭ್ರಷ್ಟಾಚಾರದ ಸರ್ಕಾರ ಇವರದ್ದು. ಮೋದಿ ನೇತೃತ್ವದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಮೋದಿಯ ಸ್ನೇಹಿತರು ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಬಿಜೆಪಿ ರಾಮನ ಹೆಸರು ಹೇಳ್ತಾರೆ ಆದರೆ ರಾಮನ ವಿರುದ್ಧದ ಕೆಲಸವೇ ಮಾಡ್ತಾರೆ, ರಾಮನ ಒಳ್ಳೆಗುಣ ಬಿಜೆಪಿಯವರಲ್ಲಿ ಇಲ್ಲ ಎಂದು ಬಿಜೆಪಿ ವಿರುದ್ದ ಗುಂಡೂರಾವ್​ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ದೇಶ ವಿಭಜನೆ ಹೇಳಿಕೆ ವಿಚಾರವನ್ನು ದಿನೇಶ್​ ಗುಂಡೂರಾವ್ ಸಮರ್ಥಿಸಿಕೊಂಡರು. ಪ್ರಸ್ತುತ ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ಘಟನೆ ನೋಡಿದರೆ ಅದು ನಿಜ ಎನಿಸುತ್ತೆ. ಬಲ ಪಂಥಿಯರನ್ನ ವಿರೋಧಿಸಿದವ್ರ ಗತಿ ಏನಾಗಿದೆ ನಿಮಗೆ ಗೊತ್ತಿದೆ, ಪ್ರಗತಿಪರ ಚಿಂತಕರೇ ಇವರ ಟಾರ್ಗೆಟ್ ಆಗಿದೆ, ಇವರ ಆಡಳಿತವೇ ಫ್ಯಾಸಿಸ್ಟ್ ರೀತಿ ಇದೆ ಎಂದು ಹೇಳಿದ್ರು.

ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್‌ನಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ರು. ದಿನೇಶ್ ಗುಂಡೂರಾವ್‌ಗೆ ಶಾಸಕರುಗಳಾದ ತನ್ವೀರ್ ಸೇಠ್, ಡಾ.ಯತೀಂದ್ರ, ಅನಿಲ್ ಚಿಕ್ಕಮಾದು, ಸಂಸದ ಧ್ರುವನಾರಾಯಣ್ ಸೇರಿ ಸ್ಥಳೀಯ ಮುಖಂಡರ ಸಾಥ್ ನೀಡಿದ್ದು,  ಸ್ವಚ್ಚತೆ ಹಾಗೂ ಕುಡಿಯುವ ನೀರಿಗೆ ಪ್ರಣಾಳಿಕೆ ಆದ್ಯತೆ ನೀಡಿದೆ.

4 thoughts on “ಬೂಟಾಟಿಕೆ, ಬೊಗಳೇ‌ ದಾಸರ ಪಕ್ಷ ಬಿಜೆಪಿ : ದಿನೇಶ್​ ಗುಂಡೂರಾವ್​ ಕಿಡಿ

Leave a Reply

Your email address will not be published.