ಶ್ರೀರಂಗಪಟ್ಟಣ : ವರಮಹಾಲಕ್ಷ್ಮಿ ಹಬ್ಬದ ವಿಶೇಷ – ಚಾಮುಂಡೇಶ್ವರಿ ದೇವಿಗೆ ನೋಟಿನ ಅಲಂಕಾರ

ಮಂಡ್ಯ : ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ ಮಾಡಲಾಗಿದೆ. ವಿವಿಧ ಮೌಲ್ಯದ ಬಣ್ಣ ಬಣ್ಣದ ನೋಟುಗಳೊಂದಿಗೆ ತಾಯಿ ಚಾಮುಂಡಿ ಕಂಗೊಳಿಸುತ್ತಿದ್ದಾಳೆ.

ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ನೋಟಿನ ಅಲಂಕಾರ ಮಾಡಲಾಗಿದೆ. ಭಕ್ತರಿಂದ ಸಂಗ್ರಹಿಸಿದ ಸುಮಾರು 5 ಲಕ್ಷ ರೂಪಾಯಿ ವಿವಿಧ ನೋಟುಗಳಿಂದ ದೇವಿಗೆ ಅಲಂಕಾರ ಮಾಡಲಾಗಿದೆ.

ಬಣ್ಣ ಬಣ್ಣ ನೋಟಿನ ಅಲಂಕಾರದೊಂದಿಗೆ ಕಂಗೊಳಿಸ್ತಿರೋ ದೇವಿ ನೋಡಲು‌ ಭಕ್ತ ಸಮೂಹ ಮುಗಿ ಬೀಳುತ್ತಿದೆ. ಶ್ರಾವಣ ಮಾಸದ ವರ ಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ದೇವಿಗೆ ವಿಶೇಷವಾಘಿ ನೋಟುಗಳಿಂದ ಅಲಂಕರಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com