ಪಶ್ಚಿಮವಾಹಿನಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ ಮಾಡಿದ ಬಿಎಸ್​ವೈ…!

ಮಂಡ್ಯ : ರಾಜ್ಯ ಬಿಜೆಪಿ ಕಾರ್ಯಾಲಯದಿಂದ ದಿವಂಗತ ಮಾಜಿ ಪ್ರಧಾನಿ ಶ್ರೀ ವಾಜಪೇಯಿ ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಲಾಗಿದೆ. ​ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದ ಸುರೇಶ್‌ ಅಂಗಡಿ, ಶಿವಕುಮಾರ್‌ ಉದಾಸಿ ನೇತೃತ್ವದಲ್ಲಿ  ಅಟಲ್​ ಜೀ ಚಿತಾಭಸ್ಮವನ್ನು ವಿಸರ್ಜಿಸಿದರು.

 ಪಶ್ಚಿಮವಾಹಿನಿಯಲ್ಲಿ ಲೀನವಾದ ವಾಜಪೇಯಿ ಚಿತಾಭಸ್ಮ

ಶ್ರೀರಂಗಪಟ್ಟಣಕ್ಕೆ ಇಂದು ಬೆಳಿಗ್ಗೆ ಮೆರವಣಿಗೆ ಮೂಲಕ ಅಟಲ್​ ಜೀ ಅವರ ಚಿತಾಭಸ್ಮವನ್ನು ಒಯ್ಯಲಾಯಿತು.  ಬಿ.ಎಸ್.ಯಡಿಯೂರಪ್ಪ, ಶ್ರೀ ಅನಂತಕುಮಾರ್, ಶೋಭಾ ಕರಂದ್ಲಾಜೆ ಜೊತೆಯಲ್ಲಿ ಸಾಗಿದ್ದು,  ನವರಂಗ್ ವೃತ್ತ, ವಿಜಯನಗರ ,ಗಾಳಿಆಂಜನೇಯ ದೇವಸ್ಥಾನ, ರಾಜರಾಜೇಶ್ವರಿ ನಗರ, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮದ್ದೂರು,ಮಂಡ್ಯ ಮೂಲಕ ಶ್ರೀ ರಂಗಪಟ್ಟಣದ ಪಶ್ಚಿಮ ವಾಹಿನಿ ತಲುಪಿ ಅಲ್ಲಿ ಅಸ್ಥಿಕಲಶ ವಿಸರ್ಜನೆ ಮಾಡಿದರು.  ದಾರಿಯುದ್ದಕ್ಕೂ ಸಾರ್ವಜನಿಕರು, ಅಟಲ್ ಜೀ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿದ್ದರು.

 ವಾಜಪೇಯಿ ಚಿತಾಭಸ್ಮ ವಿಸರ್ಜನೆ

One thought on “ಪಶ್ಚಿಮವಾಹಿನಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ ಮಾಡಿದ ಬಿಎಸ್​ವೈ…!

Leave a Reply

Your email address will not be published.

Social Media Auto Publish Powered By : XYZScripts.com