ದೆಹಲಿ : ಖ್ಯಾತ ಹಿರಿಯ ಪತ್ರಕರ್ತ, ಲೇಖಕ ಕುಲ್​ದೀಪ್​ ನಯ್ಯರ್ ಇನ್ನಿಲ್ಲ

ದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಹಿರಿಯ ಪತ್ರಕರ್ತ ಕುಲ್​ದೀಪ್​ ನಯ್ಯರ್ ವಿಧಿವಶರಾಗಿದ್ದಾರೆ. ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದು,  ಕುಲ್​ದೀಪ್​  ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ತಮ್ಮ 95ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

​ಕಳೆದ ಮೂರು ದಿನಗಳಿಂದ ದೆಹಲಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿದ್ದ ಕುಲ್​ದೀಪ್​ರವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತೆನ್ನಲಾಗಿದೆ. ಬುಧವಾರ ರಾತ್ರಿ ಸುಮಾರು 12.30ರ ಸಮಯಕ್ಕೆ ಕುಲ್​ದೀಪ್​ರವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಅಂತಿಮ ಕ್ರಿಯೆ 1 ಗಂಟೆಗೆ ಲೋಧಿ ರಸ್ತೆಯಲ್ಲಿರುವ ಘಾಟ್​ನಲ್ಲಿ ಅವರ ಅಂತಿಮ ಕ್ರಿಯೆ ನಡೆಯಲಿದೆ ಎನ್ನಲಾಗಿದೆ.

kuldeep nayar ಗೆ ಚಿತ್ರದ ಫಲಿತಾಂಶ

ರಾಜಕೀಯ ವಿಮರ್ಶಕ ಕುಲ್​ದೀಪ್​ ನಯ್ಯರ್​​ ​ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ತಮ್ಮ ಟ್ವಿಟರ್​ನಲ್ಲಿ “ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಕಠಿಣ ನಿಲುವು, ಜನಸೇವೆ ಹಾಗೂ ಉತ್ತಮನ ಭಾರತಕ್ಕಾಗಿ ನೀವು ತೋರಿದ ಬದ್ಧತೆಯನ್ನು ಯಾವತ್ತೂ ನೆಪಿಸಿಕೊಳ್ಳಲಾಗುತ್ತದೆ” ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನದ ಸಿಲ್ಕೋಟ್​ನಲ್ಲಿ 1923ರಲ್ಲಿ ಜನಿಸಿದ್ದ ನಯ್ಯರ್​, ಲಾಹೋರ್​ನಲ್ಲಿ ಕಾನೂನು ಪದವಿ ಪಡೆದಿದ್ದರು. 1990ರಲ್ಲಿ ಬ್ರಿಟನ್​ನಲ್ಲಿ ಭಾರತದ ಹೈ ಕಮಿಷನರ್​ನಂತಹ ಉನ್ನತ ಹುದ್ದೆ ಅಲಂಕರಿಸಿದ್ದ ಇವರು, ರಾಜ್ಯಸಭೆಗೆ ಸಹ ನಾಮನಿರ್ದೇಶಿತ ಸದಸ್ಯರಾಗಿದ್ದರು. ಕುಲ್​ದೀಪ್​ ನಯ್ಯರ್​ ಹಲವಾರು ಪುಸ್ತಕಗಳನ್ನು ಬರೆದಿದ್ದು, ಭಾರತ ಸರ್ಕಾರದ ಮಧ್ಯಮ ಸಲಹಾ ಅಧಿಕಾರಿಗಳಾಗಿ  ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಯುಎನ್​ಐ, ಪಿಐಬಿ, ದ ಸ್ಟೇಟ್ಸ್​ಮನ್​, ಇಂಡಿಯಾನ್​ ಎಕ್ಸ್​ಪ್ರೆಸ್​ ದೀರ್ಘಕಾಲ ಕಾರ್ಯ ನಿರ್ವಹಿಸಿದ್ದರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕುಲ್​ದೀಪ್​ ನಯ್ಯರ್​​ ​ರವರಿಗೆ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

 

Leave a Reply

Your email address will not be published.