ನನ್ನ ಒಂದು ತಿಂಗಳ ಸಂಬಳವನ್ನು ಪ್ರವಾಹ ಪರಿಹಾರಕ್ಕೆ ನೀಡುತ್ತೇನೆ : ಸಚಿವ ಎನ್. ಮಹೇಶ್

ಕೊಡಗು : ಮಡಿಕೇರಿಗೆ ಶಿಕ್ಷಣ ಸಚಿವ ಎನ್. ಮಹೇಶ್ ಭೇಟಿ ನೀಡಿದ್ದಾರೆ. ಮಡಿಕೇರಿಯಲ್ಲಿ ಸಚಿವರ ಸುದ್ದಿಗೋಷ್ಠಿ ನಡೆಸಿದ ಅವರು ‘ ಪರಿಹಾರ ಕೇಂದ್ರಗಳಲ್ಲಿ ಊಟ, ವಸತಿಗೆ ಸಮಸ್ಯೆ ಇಲ್ಲ. ಮನೆ ಕಳೆದುಕೊಂಡ ಎಲ್ಲರಿಗೂ ಮನೆ ಕಟ್ಟಿ ಕೊಡುತ್ತೇವೆ. ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಕೊಡುತ್ತೇವೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಕಲ್ಪಿಸುತ್ತೇವೆ.

‘ ಮಹಿಳಾ ಸಂಘಗಳು ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಕ್ರಮ ಕೈಗೊಳ್ಳುತ್ತೇನೆ. ಸಮಸ್ಯೆ ಇಲ್ಲದ ಕಡೆ ಶಾಲೆಗಳು ಆರಂಭವಾಗಿದೆ. 9 ಶಾಲೆಗಳು ಸಂಪೂರ್ಣ ಹಾಳಾಗಿದೆ. 61 ಶಾಲೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಅಲ್ಲಿನ ವಿದ್ಯಾರ್ಥಿಗಳನ್ನು ಪಕ್ಕದ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಿಗೆ ಸೇರ್ಪಡೆಗೊಳಿಸಲಾಗುವುದು. ಪರಿಹಾರ ಕೇಂದ್ರದಲ್ಲೇ ತಾತ್ಕಾಲಿಕವಾಗಿ ಕಲಿಕಾ ಚಟುವಟಿಕೆ ನಡೆಸಲಾಗುವುದು. ಶಾಲೆಗಳನ್ನು ಮರುನಿರ್ಮಾಣ, ನವೀಕರಣಕ್ಕೆ 4 ಕೋಟಿ ರೂ. ಬೇಕಾಗುತ್ತೆ ‘ ಎಂದಿದ್ದಾರೆ.

‘ ನಾನು ಒಂದು ತಿಂಗಳ ಸಂಬಳವನ್ನು ಪರಿಹಾರಕ್ಕೆ ನೀಡುತ್ತೇನೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಶಾಲೆಗಳ ನಿರ್ಮಾಣಕ್ಕೆ 4 ಕೋಟಿ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದೇನೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com