ಕೊಡಗು, ಕೇರಳ ಜಲಪ್ರಳಯ : ಸಂತ್ರಸ್ತರಿಗೆ ರಾಯರ ಮಠದಿಂದ ಆರ್ಥಿಕ ನೆರವು..!

ರಾಯಚೂರು : ಭಾರಿ ಮಳೆ, ಗುಡ್ಡಕುಸಿತದಿಂದ ಕೊಡಗು ಹಾಗೂ ಕೇರಳದ  ಜನರು ತತ್ತರಿಸಿಹೊಂಗಿದ್ದು, ಎಲ್ಲಾ ಕ್ಷೇತ್ರದಿಂದ ಪರಿಹಾರ ಬರುತ್ತಿದೆ. ಪ್ರವಾಹ ಸಂತ್ರಸ್ತರಿಗೆ ಮಂತ್ರಾಲಯ ರಾಯರ ಮಠದಿಂದ ತಲಾ 15 ಲಕ್ಷ ರೂ  ನೆರವು ನೀಡಿದ್ದಾರೆ.

ಇದನ್ನು ಸ್ವತಃ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದು, ಕೊಡಗು ಮತ್ತು ಕೇರಳದ ಸಂತ್ರಸ್ತರಿಗೆ ಆರಂಭಿಕವಾಗಿ ಈ ಆರ್ಥಿಕ ನೆರವು ನೀಡುತ್ತಿದ್ದು ಚಾತುರ್ಮಾಸ ವ್ರತದ ನಂತರ ಪ್ರವಾಸ ಕೈಗೊಂಡು ಹಾನಿಯ ವರದಿ ಪಡೆದು ಮಠದಿಂದ ಪರಿಹಾರ ಕಾರ್ಯ ಕೈಗೊಳ್ಳುವ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com