ಕೊಡಗು ನೆಪದಲ್ಲಿ ಯಶೋಮಾರ್ಗ ಹೆಸರು ದುರ್ಬಳಕೆ : ರಾಜಹುಲಿ​ ಖಡಕ್​ ವಾರ್ನಿಗ್​

ಬೆಂಗಳೂರು : ಮಹಾಮಳೆಗೆ ತತ್ತರಿಸಿದ ಮಂಜಿನ ನಗರಿಯ ಜನರಿಗೆ ಸ್ಯಾಂಡಲ್​ವುಡ್​ನ ಸಿನಿಮಾ ತಾರೆಯರು ಹಾಗೂ ಅವರ ಅಭಿಮಾನಿಗಳು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಆದರೆ ಕಿಡಿಕೇಡಿಗಳು ಕೊಡಗು ಪ್ರವಾಹದ ನೆಪದಲ್ಲಿ ಮೊಸ ಮಾಡುತ್ತಿದ್ದಾರೆ.  ಹಾಗೆಯೇ ಯಶೋಮಾರ್ಗದ ಹೆಸರನ್ನು ದುರ್ಬಳಕೆ ಮಾಡುತ್ತಿದ್ದು, ಇದಕ್ಕೆ ರಾಜಹುಲಿ ಬೇಸರ ವ್ಯಕ್ತಪಡಿಸಿದ್ದಾರೆ.

Image result for yash

ಸ್ಯಾಂಡಲ್​ವುಡ್​ ಸ್ಟಾರ್ಸ್ ಗಳು ಎಲ್ಲರೂ ಟ್ರಕ್ ಮೂಲಕ ಅಕ್ಕಿ, ಬಟ್ಟೆ, ಅಗತ್ಯ ವಸ್ತುಗಳನ್ನ ಕಳುಹಿಸಿದ್ದಾರೆ. ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಕೂಡ ತಮ್ಮ ‘ಯಶೋಮಾರ್ಗ ಫೌಂಡೇಶನ್’ ಮೂಲಕ ಕೊಡಗಿನ ಜನತೆಗೆ ಬೇಕಾದ ವಸ್ತುಗಳನ್ನ ಪೂರೈಸಿದ್ದಾರೆ.  ಆದರೆ  ರಾಕಿಂಗ್​ ಸ್ಟಾರ್​ ಯಶ್​ ಬೇಸರ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕೊಡಗಿಗೆ ಸಹಾಯ ಮಾಡುವ ನೆಪದಲ್ಲಿ ಯಶೋಮಾರ್ಗ ಹೆಸರನ್ನು ದುರ್ಬಳಕೆ ಮಾಡುತ್ತಿರುವುದು ರಾಮಚಾರಿಗೆ ಬೇಸರ ತಂದಿದೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ದಯವಿಟ್ಟು ಕೊಡಬೇಡಿ
ಕೊಡಗಿನ ನಿರಾಶ್ರಿತರಿಗೆ ಯಶೋಮಾರ್ಗ ಫೌಂಡೇಶನ್​ ವತಿಯಿಂದ ಅಗತ್ಯ ವಸ್ತಗಳು ಸ್ವತಃ ಯಶ್​ ಅವರು ಸ್ವತಃ ದುಡುಮೆಯ ಹಣದಲ್ಲಿ ನಿರಾಶ್ರಿತರಿಗೆ ಕಳುಹಿಸುತ್ತಿದ್ದು, ಯಶೋಮಾರ್ಗ  ಟೀಂ ಲಕ್ಷಾಂತರ ಮೌಲ್ಯದ ಅಗತ್ಯ ವಸ್ತುಗಳನ್ನು ಟ್ರಕ್​ ಪೂರ ಕಳುಹಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com