ಬಿಜೆಪಿ ನಾಯಕರಿಗೆ ಅಧಿಕಾರ ಮುಖ್ಯ ಹೊರತು ಅಭಿವೃದ್ಧಿ ಅಲ್ಲ : ದಿನೇಶ್​ ಗುಂಡೂರಾವ್​

ಹುಬ್ಬಳ್ಳಿ :  ಬಿಜೆಪಿ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಏರಲು ಹಪಾಹಪಿಸುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರಿಗೆ ಅಧಿಕಾರ ಮುಖ್ಯ ಹೊರತು ಅಭಿವೃದ್ಧಿ ಅಲ್ಲ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಈ ಹಿಂದೆ ಬಹುಮತವಿಲ್ಲದಿದ್ದರೂ, ಸರ್ಕಾರ ರಚನೆ ಮಾಡಲು ಹೋಗಿ ಬಿಜೆಪಿ ಸೋತಿದೆ. ಅನೈತಿಕ ಪದ್ದತಿಗಳನ್ನು ಪ್ರಯೋಗ ಮಾಡುವುದು ರಾಜ್ಯ ಬಿಜೆಪಿ ನಾಯಕರಗಳ ಕೆಟ್ಟ ಸಂಪ್ರದಾಯವಾಗಿದೆ, ರಾಜ್ಯ ಬಿಜೆಪಿ ಬೇರೆ ಪಕ್ಷಗಳ ಶಾಸಕರಿಗೆ ಆಮೀಷವೊಡ್ಡಿ ತಮ್ಮ ಪಕ್ಷದ ಕಡೆಗೆ ಸೆಳೆಯುವುದೇ ಒಂದು ಕೆಲಸವಾಗಿದೆ, ಬಿಜೆಪಿಗೆ ಯಾವುದೇ ಧರ್ಮ, ನೀತಿ, ನೈತಿಕತೆಯಿಲ್ಲ, ರಾಜ್ಯ ಬಿಜೆಪಿ ನಾಯಕರಿಗೆ ಅಧಿಕಾರ ಮುಖ್ಯ ಹೊರತು ಅಭಿವೃದ್ಧಿ ಅಲ್ಲ, ರಾಜ್ಯದಲ್ಲಿ ಜೆಡಿಎಸ್ ,ಕಾಂಗ್ರೆಸ್ ಮೈತ್ರಿ ಸರ್ಕಾರ ಮುಂದುವರೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿತ ಚಿತ್ರ

ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಗುಂಡೂರಾವ್​, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ತಯಾರಿ ನಡೆಯುತ್ತಿದೆ, ಈಗಾಗಲೇ ಹಲವಾರು ಸಭೆಗಳನ್ನು ಮಾಡಲಾಗಿದೆ. ಸೆಪ್ಟೆಂಬರ್ 1-2 ರಿಂದ ಬೆಂಗಳೂರಿನಲ್ಲಿ ಲೋಕಸಭಾ ಕ್ಷೇತ್ರವಾರು ಸಭೆಗಳನ್ನು ನಡೆಸಲಾಗವುದು. ಕಳೆದ ಮೂರ್ನಾಲ್ಕು ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ನೆಲೆಯುರಿದೆ. ಬಿಜೆಪಿ ಎಂಪಿಗಳಿಂದ ರಾಜ್ಯಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಪ್ರಯೋಜನವಿಲ್ಲ.

ಮಹಾದಯಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜ್ಯದ ಜನತೆಗೆ ದಾರಿ ತಪ್ಪಿಸಿದ್ದರು, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಮಿತ್ ಷಾ ನಮ್ಮ ಪಕ್ಷ ಗೆಲ್ಲಿಸಿ ಮಹದಾಯಿ ವಿವಾದ ಬಗೆಹರಿಸುತ್ತವೆ ಎಂದಿದ್ದರು, ಆದ್ರೆ ಚುನಾವಣೆ ಮುಗಿದ ನಂತರ ಅಮಿತ್ ಷಾ ಮತ್ತು ಪ್ರಧಾನಿ ಮೋದಿಯವರು ಅದರ ಬಗ್ಗೆ ಮಾತನಾಡಲಿಲ್ಲ. ಮಹಾದಾಯಿ, ಕೃಷ್ಣ , ಹಾಗೂ ಬರ ಪರಿಹಾರದಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಹಾಗಾಗಿ ರಾಜ್ಯದಿಂದ ಬಿಜೆಪಿ ಎಂಪಿಗಳನ್ನು ಗೆಲ್ಲಿಸಿ ಪ್ರಯೋಜನವಿಲ್ಲ. ದೇಶದಲ್ಲಿ ಕೇಂದ್ರ ಸರ್ಕಾರ ಮಾತಿನ ಮೇಲೆ ಆಡಳಿತ ನಡೆಸುತ್ತಿದೆ ಹೊರತು ಅಭಿವೃದ್ಧಿ ಕಾರ್ಯಗಳಿಂದಲ್ಲ ಇದುವರೆಗೂ ಕೇಂದ್ರ ಸರ್ಕಾರ ನೀಡಿದ ಭರವಸೆಯಲ್ಲಿ ಒಂದನ್ನು ಈಡೇರಿಸಿಲ್ಲ ಎಂದು ದಿನೇಶ್​ ಗುಂಡೂರಾವ್​ ಬಿಜೆಪಿ  ಮೇಲೆ ಕಿಡಿಕಾರಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com