ಧಾರವಾಡ : ಜಿಟಿ ಜಿಟಿ ಮಳೆಗೆ ಮನೆಯ ಗೋಡೆ ಕುಸಿತ : ಸ್ಥಳದಲ್ಲಿಯೇ ಸಾವನ್ನಪ್ಪಿದ ಯುವತಿ..!

ಧಾರವಾಡ : ಎಡೆಬಿಡದೇ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿದಿರುವ ಘಟನೆ ಧಾರವಾಡ ಜಿಲ್ಲೆಯ ಆಳ್ನಾವರ ಪಟ್ಟಣದಲ್ಲಿ ನಡೆದಿದೆ. ಗೋಡೆ ಕುಸಿತ ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಶಶಿಕಲಾ (20) ಮೃತ ಯುವತಿಯಾಗಿದ್ದು, ಮತ್ತೋರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ. ಪ್ರಕಾಶ ಸುರೋಜಿ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ಮನೆ ಕುಸಿದ ಮಣ್ಣಲ್ಲಿ ಸಿಲುಕಿ ಯುವತಿ ಸಾವಿಗೀಡಾಗಿದ್ದಾಳೆ.

ಗಾಯಾಳು ಮುಕ್ತಾ (18) ಳನ್ನು ಸ್ಥಳೀಯರು ಅಳ್ನಾವರ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಿನ್ನೆಯಿಂದ ಜೋರಾಗಿ ಸುರಿಯುತ್ತಿರೋ ಮಳೆಯಿಂದ ದುರಂತ ಸಂಭವಿಸಿದ್ದು, ಅಳ್ನಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com