ಜನ್ಮದಿನವನ್ನು ಕೊಡಗಿನ ನಿರಾಶ್ರಿತರಿಗೆ ಮುಡಿಪಿಟ್ಟು ಮಾನವೀಯತೆ ಮೆರೆದ ಡಾಲಿ..!

ಬೆಂಗಳೂರು : ಟಗರು ಡಾಲಿ ಧನಂಜಯ್​ ತಮ್ಮ ಹುಟ್ಟುಹಬ್ಬವನ್ನು ಕೊಡಗಿನ ಜನರಿಗಾಗಿ ಮೀಸಲಿಟ್ಟಿದ್ದಾರೆ. ಹೌದು ಡಾಲಿ ಎಂದೇ ಖ್ಯಾತಿ ಪಡೆದಿರುವ ಧನಂಜಯ್​ ಇಂದು ಅವರ ಹುಟ್ಟುಹಬ್ಬ ಸಂಭ್ರಮಿಸದೇ ಕೊಡಗಿನ ನಿರಾಶ್ರಿತರಿಗಾಗಿ ಮುಡಿಪಿಟ್ಟಿದ್ದಾರೆ.

ಜಯನಗರ ಬಳಿ ಇರುವ ಶಾಲಿನಿ ಮೈದಾನದಲ್ಲಿರುವ ಧನಂಜಯ್ ಮನೆ ಮುಂದೆ ನಿನ್ನೆ ರಾತ್ರಿಯಿಂದಲೇ ನೂರಾರು ಅಭಿಮಾನಿಗಳು ಧಾವಿಸಿದ್ದು, ಡಾಲಿ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಪ್ಲಾನ್​ ಮಾಡಿದ್ದರು, ಇದಕ್ಕೆ ಓಲ್ಲೆ ಎಂದ ಧನಂಜಯ್​ ಹುಟ್ಟುಹಬ್ಬವನ್ನು ನೆರೆಪೀಡಿತ ಕೊಡಗು ಜನರ ನೆರವಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಭಿಮಾನಿಗಳು  ಶುಭ ಕೋರಿದಲ್ಲದೆ, ಕೈಲಾದ ದೇಣಿಗೆಯನ್ನು ನೀಡಿದರು. ಸೆಲ್ಫೀಗೊಂದಕ್ಕೆ ಕಾಣಿಕೆ ಎಂಬಂತೆ ಧನ ಸಂಗ್ರಹಣೆ ಕಾರ್ಯ ಮಾಡಿದ ನಟ ಧನಂಜಯ್ ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ ಅವರಿಗೆ ನಾನು ಸಹ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಧನಂಜಯ್​, ನಟ ರವಿಚಂದ್ರನ್ ಅವರು ಹೇಳಿರುವ ಕೊಡಗು ಮರು ನಿರ್ಮಾಣದ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಕಾರ್ಯಕ್ಕೆ ನಾವು ಕೂಡ ಸಾಥ್ ಕೊಡುತ್ತೀವಿ ಎಂದು ಹೇಳಿದರು.

 

Leave a Reply

Your email address will not be published.

Social Media Auto Publish Powered By : XYZScripts.com