Cricket : ಟೆಸ್ಟ್ ತಂಡದಲ್ಲಿ ಪೃಥ್ವಿ ಷಾ, ಹನುಮ ವಿಹಾರಿಗೆ ಸ್ಥಾನ : ವಿಜಯ್, ಕುಲದೀಪ್‍ಗೆ ಕೊಕ್

ಇಂಗ್ಲೆಂಡ್ ವಿರುದ್ಧದ 4 & 5 ನೇ ಟೆಸ್ಟ್ ಪಂದ್ಯಗಳಿಗಾಗಿ ಭಾರತ ತಂಡದಲ್ಲಿ ಪೃಥ್ವಿ ಷಾ, ಹನುಮ ವಿಹಾರಿಗೆ ಅವಕಾಶ ನೀಡಲಾಗಿದೆ. ಆರಂಭಿಕ ಬ್ಯಾಟ್ಸಮನ್ ಮುರಳಿ ವಿಜಯ್ ಹಾಗೂ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ರನ್ನು ತಂಡದಿಂದ ಕೈ ಬಿಡಲಾಗಿದೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 4ನೇ ಟೆಸ್ಟ್ ಪಂದ್ಯ ಆಗಸ್ಟ್ 30 ರಿಂದ ಸೌತ್ ಹ್ಯಾಂಪ್ಟನ್ ನಲ್ಲಿರುವ ರೋಸ್ ಬೌಲ್ ಮೈದಾನದಲ್ಲಿ ನಡೆಯಲಿದೆ. 5ನೇ ಟೆಸ್ಟ್ ಮ್ಯಾಚ್ ಸೆಪ್ಟೆಂಬರ್ 7 ರಿಂದ ಲಂಡನ್ನಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.

ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳಿಂದ ಜಯಿಸುವ ಮೂಲಕ ಭಾರತ ಆತಿಥೇಯ ಇಂಗ್ಲೆಂಡ್ ಗೆ ತಿರುಗೇಟು ನೀಡಿದೆ.

Leave a Reply

Your email address will not be published.

Social Media Auto Publish Powered By : XYZScripts.com