ಸಂತ್ರಸ್ತರಿಗೆ ನೆರವಾದ ಪಲಿಮಾರು ಶ್ರೀ : ಒಂದು ಗ್ರಾಮವನ್ನು ದತ್ತು ಪಡೆಯುವುದಾಗಿ ಘೋಷಣೆ

ಉಡುಪಿ : ಮಹಾಮಳೆಗೆ ಕೊಡಗಿನ ಜನರು ತಮ್ಮ ಆಸ್ತಿ, ಮನೆ, ಎಲ್ಲಾವನ್ನು ಕಳೆದುಕೊಂಡಿದ್ದಾರೆ. ಕೊಡಗಿನಲ್ಲಾದ ಪ್ರವಾಹಕ್ಕೆ ಅನೇಕ ಪ್ರಾಣಿಗಳು ಹಾಗೂ ಸುಮಾರು ಜನ ನೀರಿನಲ್ಲಿ ಪ್ರಾಣಬಿಟ್ಟಿದ್ದಾರೆ. ಮಂಜಿನ ನಗರಿಯ ನೊಂದ ಜನಕ್ಕೆ ಆಸರೆಯಾಗಲು ಕೊಡಗು ಜಿಲ್ಲೆಯ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳುವುದಾಗಿ ಪಲಿಮಾರು ಶ್ರೀ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉಡುಪಿ ಕೃಷ್ಣ ಮಠದ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು, ಪ್ರವಾಹ ಪೀಡಿದ ಕೊಡಗು ಜಿಲ್ಲೆಯ ಒಂದು ಗ್ರಾಮವನ್ನು ದತ್ತು ಪಡೆದುಕೊಂಡು ಅದನ್ನು ಸಾರ್ವಜನಿಕರ ನೆರವಿನಿಂದ ಪುನರ್ ನಿರ್ಮಾಣ ಮಾಡುತ್ತೇವೆಂದು ಶ್ರೀಗಳು ತಿಳಿಸಿದ್ದಾರೆ.
ಶಾಸ್ತ್ರಗಳಲ್ಲಿ ಹೇಳಿರುವಂತೆ ಅಷ್ಟ ಭಾವಪುರುಷಗಳಲ್ಲಿ ದಯೆ ಎಂಬುದು ಭಗವಂತನಿಗೆ ಅತ್ಯಂತ ಪ್ರಿಯವಾದುದು. ಆದ್ದರಿಂದ ಕಷ್ಟದಲ್ಲಿರುವವರಿಗೆ ಕರುಣೆ ಮತ್ತು ದಯೆಯಿಂದ ಸಹಾಯ ಮಾಡಿದರೆ ಅವರಲ್ಲಿರುವ ಭಗವಂತ ಸಂತುಷ್ಟನಾಗುತ್ತಾನೆ. ಕೊಡಗಿನಲ್ಲಿ ಸಂಕಷ್ಟಕ್ಕೀಡಾಗಿರುವವರಿಗೆ ಹೆಗಲು ಕೊಡುವುದು ದೇವರ ಪೂಜೆಯಷ್ಟೇ ಶ್ರೇಷ್ಠವಾದುದು ಎಂದು ತಿಳಿಸಿದ್ದಾರೆ.
ಕೊಡಗಿನಲ್ಲಾದ ಪ್ರವಾಹದಿಂದಾಗಿ ಜನರು  ತಮ್ಮ ಮನೆ ಆಸ್ತಿಪಾಸ್ತಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ ಎಲ್ಲಾರು ತಮ್ಮ ಕೈಲಾದಷ್ಟು ವಸ್ತುಗಳು ಹಾಗೂ ಹಣವನ್ನು ಸಿಎಂ ಖಾತೆಗೆ ಹಾಕುತ್ತಿದ್ದು, ಉಡುಪಿಯ ಪಲಿಮಾರು ಶ್ರೀಗಳು ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಪುನರ್​ ನಿರ್ಮಾಣ ಮಾಡವುದಾಗಿ ಹೇಳಿದ್ದಾರೆ.

Leave a Reply

Your email address will not be published.