ಮಂಡ್ಯ : ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು…!

ಮಂಡ್ಯ : ಬದುಕಿರುವ ವ್ಯಕ್ತಿಗೆ ಅಧಿಕಾರಿಗಳು ಮರಣಪತ್ರ ನೀಡಿ ಎಡವಟ್ಟು ಮಾಡಿಕೊಂಡಿರೋ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಮೃತ ತಂದೆಯ ಮರಣ ಪ್ರಮಾಣ ಪತ್ರ ನೀಡಿ ಎಂದು ಅರ್ಜಿ ಸಲ್ಲಿಸಿದ ಮಗನ ಹೆಸರಲ್ಲೇ ಅಧಿಕಾರಿಗಳು ಮರಣ ಪ್ರಮಾಣದ ಪತ್ರವನ್ನು ನೀಡಿ ಎಡವಟ್ಟು ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮದ ರಾಮೇಗೌಡ ಎಂಬ ವ್ಯಕ್ತಿಗೆ ಅರೆಕೆರೆ ಗ್ರಾಮದ ನಾಡ ಕಚೇರಿಯ ಉಪ ತಹಶೀಲ್ದಾರ್ ರಿಂದ ಈ‌ ಮರಣಪತ್ರ ನೀಡಿದ್ದಾರೆ. ಬದುಕಿದ್ದ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿರೋದ್ರಿಂದ ಈತನ ಮತ ಚಲಾವಣೆ ಹಕ್ಕು ಕೂಡ ರದ್ದುಗೊಂಡಿದೆ. ಇದನ್ನೂ ಸರಿಪಡಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು, ಆ ತಪ್ಪನ್ನು ಅಧಿಕಾರಿಗಳು  ಸರಿಪಡಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತನ್ನ ತಂದೆಯ ಮರಣಪತ್ರಕ್ಕಾಗಿ ಅರ್ಜಿ ನೀಡಿದ ರಾಮೇಗೌಡನಿಗೆ ಅಧಿಕಾರಿಗಳು‌ ತಂದೆಯ ಮರಣ ಪತ್ರದ ಜೊತೆ ಆತನ ಮರಣ ಪ್ರಮಾಣ ಪತ್ರವನ್ನು‌ ಕೂಡ ನೀಡಿದ್ದಾರೆ. ಇನ್ನು ಅಚ್ಚರಿಯೆಂದ್ರೆ ರಾಮೇಗೌಡರನ್ನೆ ಮೊದಲು‌ ಸತ್ತಿರುವುದಾಗಿ ಆ ಮರಣ ಪತ್ರಲ್ಲಿದ್ದು. ನಂತರ ಆತನ ತಂದೆ ಸಾವಾಗಿದೆ ಎಂಬಂತೆ ಮರಣ ಪ್ರಮಾಣ ಪತ್ರದಲ್ಲಿ ದಿನಾಂಕ ನಮೂದಿಸಿದ್ದಾರೆ.ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಎಡವಟ್ಟಿನ ಬಗ್ಗೆ ತಿಳಿಸಿದ್ರು ಪ್ರಶ್ನೆ ಮಾಡಿದ ಜನ್ರಿಗೆ ಜಾತಿ‌ನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿ ದೌರ್ಜನ್ಯ ನಡೆಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ‌.

ಈ ಅಧಿಕಾರಿಯ ತಪ್ಪನ್ನು ಗಂಭೀರವಾಗಿ ಪರಿಗಣಿಸಿರುವ ರಾಮೇಗೌಡ ಸೇರಿದಂತೆ ಈ ಊರಿನ ಗ್ರಾಮಸ್ಥರು ಅಧಿಕಾರಿಗೆ ಮರಣ ಪ್ರಮಾಣ ಪತ್ರದ ತಪ್ಪನ್ನು ಸರಿಪಡಿಸುವಂತೆ ಅಧಿಕಾರಿಯ ಗಮನಕ್ಕೆ ತಂದ್ರು ಉಡಾಪೆ ಉತ್ತರ ನೀಡೊದ್ರ ಜೊತೆಗೆ ಪ್ರಶ್ನೆ ಮಾಡಿದ ಜನ್ರಿಗೆ ಜಾತಿನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿ ದೌರ್ಜನ್ಯ ನಡೆಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಅಲ್ದೆ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿ ಮಂಜುಶ್ರೀರವರಿಗೆ ದೂರು ಸಲ್ಲಿಸಿದ್ದು ,ತಪ್ಪನ್ನು ಸರಿಪಡಿಸೋ ಮನವಿ ಮಾಡಿದ್ದಾರೆ.

Leave a Reply

Your email address will not be published.