Asian Games : ಪಿಸ್ಟಲ್ : ಚಿನ್ನದ ಪದಕ ಜಯಿಸಿದ ಶೂಟರ್ ರಾಹಿ ಸರ್ನೋಬತ್

ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಮತ್ತೊಂದು ಸ್ವರ್ಣ ಪದಕ ಒಲಿದಿದೆ. ಬುಧವಾರ ನಡೆದ ಮಹಿಳೆಯರ 25 ಮೀಟರ್ ಪಿಸ್ಟಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ರಾಹಿ ಸರ್ನೋಬತ್ ಚಿನ್ನದ ಪಕದವನ್ನು ಜಯಿಸಿದ್ದಾರೆ.

ಇದು 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದಿರುವ 4ನೇ ಸ್ವರ್ಣ ಹಾಗೂ ಒಟ್ಟು 11ನೇ ಪದಕವಾಗಿದೆ. ಭಾರತ ನಾಲ್ಕು ಚಿನ್ನ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಆರಂಭಿಕ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಮತ್ತೋರ್ವ ಮಹಿಳಾ ಶೂಟರ್ ಮನು ಭಾಕರ್ ಫೈನಲ್ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

 

3 thoughts on “Asian Games : ಪಿಸ್ಟಲ್ : ಚಿನ್ನದ ಪದಕ ಜಯಿಸಿದ ಶೂಟರ್ ರಾಹಿ ಸರ್ನೋಬತ್

Leave a Reply

Your email address will not be published.

Social Media Auto Publish Powered By : XYZScripts.com