Cricket : ಜಯದ ಹೊಸ್ತಿಲಲ್ಲಿ ಟೀಮ್ ಇಂಡಿಯಾ : 5 ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ

ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಹೊಸ್ತಿಲಲ್ಲಿದ್ದು, ಇಂಗ್ಲೆಂಡ್ ತಂಡದ ಒಂದು ವಿಕೆಟ್ ಮಾತ್ರ ಉರುಳಿಸುವ ಅಗತ್ಯವಿದೆ. ಗೆಲ್ಲಲು 522 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿರುವ ಆತಿಥೇಯ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ನಾಲ್ಕನೇ ದಿನದಾಟದ ಅಂತ್ಯಕ್ಕೆ 311 ಕ್ಕೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.

ಆದಿಲ್ ರಾಶಿದ್ (30*) ಹಾಗೂ ಜೇಮ್ಸ್ ಆ್ಯಂಡರ್ಸನ್ (8*) ಅಜೇಯರಾಗುಳಿದಿದ್ದು ಕ್ರೀಸ್ ನಲ್ಲಿದ್ದಾರೆ. ಮಾರಕ ದಾಳಿ ನಡೆಸಿದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿದರು. ಇಶಾಂತ್ ಶರ್ಮಾ 2, ಹಾರ್ದಿಕ್ ಪಾಂಡ್ಯ 1 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು. ಇಂಗ್ಲೆಂಡ್ ಪರವಾಗಿ ಶತಕ ಬಾರಿಸಿದ ಜೋಸ್ ಬಟ್ಲರ್ 106 ಹಾಗೂ ಅರ್ಧಶತಕ ಸಿಡಿಸಿದ ಬೆನ್ ಸ್ಟೋಕ್ಸ್ 62 ರನ್ ಗಳಿಸಿದರು.

 

Leave a Reply

Your email address will not be published.

Social Media Auto Publish Powered By : XYZScripts.com