ಜಮ್ಮು – ಕಾಶ್ಮೀರ : ಗುಂಡಿಕ್ಕಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆಗೈದ ಉಗ್ರರು..!

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಬಿಜೆಪಿ ಕಾರ್ಯಕರ್ತನನ್ನು ಬುಧವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಪುಲ್ವಾಮಾದ ರಾಖ್ ಎ ಲಿಟ್ಟರ್ ಪ್ರದೇಶದಲ್ಲಿ ಶಾಬೀರ್ ಅಹ್ಮದ್ ಭಟ್ ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ‘ಶಾಬೀರ್ ಅಹ್ಮದ್ ಭಟ್ ನನ್ನು ಮಂಗಳವಾರ ಸಾಯಂಕಾಲವೇ ಉಗ್ರರು ಅಪಹರಿಸಿದ್ದರು ‘ ಎಂದು ಪೋಲೀಸರು ತಿಳಿಸಿದ್ದಾರೆ.

ಶಾಬಿರ್ ಅಹ್ಮದ್ ಭಟ್ ಸಾವಿಗೆ ಸಂತಾಪ ಸೂಚಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ‘ ಭಟ್ ಹತ್ಯೆ ಹೇಡಿತನದ ಕೃತ್ಯವಾಗಿದ್ದು, ಅತ್ಯಂತ ಖಂಡನೀಯವಾಗಿದೆ. ಮೂಲಭೂತವಾದಿಗಳು ಕಾಶ್ಮೀರದ ಯುವಜನತೆ ತಮಗಾಗಿ ಉತ್ತಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ ‘ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com