ಇಂಡೋನೇಷ್ಯಾ : ಮಗುವಿಗೆ ‘ಏಷ್ಯನ್ ಗೇಮ್ಸ್’ ಎಂದು ಹೆಸರಿಟ್ಟ ಕ್ರೀಡಾಪ್ರೇಮಿ ದಂಪತಿ..!

ಇಂಡೋನೇಷ್ಯಾದ 18ನೇ ಏಷ್ಯನ್ ಗೇಮ್ಸ್ ನಡೆಯುತ್ತಿದೆ. ಇಂಡೋನೇಷ್ಯಾದ ಕ್ರೀಡಾಪ್ರೇಮಿ ದಂಪತಿಗಳು ತಮಗೆ ಜನಿಸಿದ ಹೆಣ್ಣು ಮಗುವಿಗೆ ‘ಏಷ್ಯನ್ ಗೇಮ್ಸ್’ ಎಂದು ಹೆಸರಿಟ್ಟಿದ್ದಾರೆ. ಕ್ರೀಡಾಕೂಟದ ಸಹ ಆತಿಥ್ಯ ವಹಿಸಿರುವ ಪಾಲೆಂಬಾಂಗ್ ನಗರದಲ್ಲಿ ಒಂದು ತಿಂಗಳ ಹಿಂದಷ್ಟೇ ಈ ಹೆಣ್ಣುಮಗು ಜನಿಸಿತ್ತು. ಮಗುವಿಗೆ ‘ಆಬಿದಾ ಏಷ್ಯನ್ ಗೇಮ್ಸ್..’ ಎಂದು ನಾಮಕರಣ ಮಾಡಿದ್ದಾರೆ.

Image result for asian games baby name

ತಮ್ಮ ದೇಶದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಕ್ರೀಡಾಕೂಟವಾಗಿರುವ ಏಷ್ಯಾಡ್ ನಡೆಯುತ್ತಿರುವುದು ಐತಿಹಾಸಿಕ ಕ್ಷಣವಾಗಿದೆ. ಏಷ್ಯನ್ ಗೇಮ್ಸ್ ಕೆಲವಾರು ವರ್ಷಗಳಿಗೊಮ್ಮೆ ಮಾತ್ರ ನಡೆಯುವ ಅಪರೂಪದ ಕ್ರೀಡಾಕೂಟವಾಗಿದೆ.  ಈ ಸಮಯದಲ್ಲೇ ಜನಿಸಿರುವ ನಮ್ಮ ಮಗುವಿಗೆ ಕ್ರೀಡಾಕೂಟದ ಸ್ಮರಣಾರ್ಥವಾಗಿ ಏಷ್ಯನ್ ಗೇಮ್ಸ್ ಎಂದು ಹೆಸರಿಟ್ಟಿದ್ದೇವೆ ‘ ಎಂದು ದಂಪತಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com