ಕುಖ್ಯಾತ ರೌಡಿ ಶೀಟರ್ ಅಬ್ರಾಹಂ ಲುಂಜಾಲ್ ಗಡಿಪಾರು : ಹು-ಧಾ ಪೋಲೀಸ್ ಆಯುಕ್ತರ ಆದೇಶ

ಅವಳಿ ನಗರದ ಕುಖ್ಯಾತ ರೌಡಿ ಶೀಟರ್ ನನ್ನು ಗಡಿ ಪಾರು ಮಾಡಿ ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಕೇಶ್ವಾಪುರ ನಿವಾಸಿ ಲಾಜರಸ್ ಅಬ್ರಾಹಂ ಲುಂಜಾಲ್ (41) ಗಡಿಪಾರಾದ ವ್ಯಕ್ತಿಯಾಗಿದ್ದಾನೆ.

ಈತನ ವಿರುದ್ದ ಕೊಲೆ ಯತ್ನ ಪ್ರಕರಣಗಳು 5, ಹಲ್ಲೆ ಪ್ರಕರಣಗಳು 5, ದೊಂಬಿ ಪ್ರಕರಣ 10 ಹಾಗೂ ರಿಯಲ್ ಎಸ್ಟೇಟ್‌ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹೆದರಿಸುವ ಪ್ರಕರಣಗಳು ಸೇರಿದಂತೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದ 31 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಶಾಂತಿ ಭಂಗ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಿಂದ ಗಡಿ ಪಾರು ಮಾಡಿ ಎಂ ಎನ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಗುಂಡಾಗಿರಿ, ಮಟಕಾ, ಗ್ಯಾಂಬ್ಲಿಂಗ್, ವೇಶ್ಯಾವಾಟಿಕೆ, ಗಾಂಜಾ ಮತ್ತು ಮಾದಕ ವಸ್ತುಗಳಂತ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಬಗ್ಗೆ ಮಾಹಿತಿ‌ ನೀಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com