ದೆಹಲಿ : ಕಾಂಗ್ರೆಸ್​ ಹಿರಿಯ ನಾಯಕ ಗುರುದಾಸ್​ ಕಾಮತ್​ ವಿಧಿವಶ….!

ದೆಹಲಿ : ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್​ ನಾಯಕ ಗುರುದಾಸ್​ ಕಾಮತ್​  ಹೃದಯಾಘಾತದಿಂದ ಚೈನಕಪುರದ ಪ್ರಿಮಸ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಾಂಗ್ರೆಸ್​ನ ಹಿರಿಯ ನಾಯಕ ಕಾಮತ್ ತಮ್ಮ​ 63 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಮತ್​ ಅಗಲಿಕೆಗೆ  ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕಾಂಗ್ರೆಸ್​ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಪ್ರಿಮಸ್​ ಆಸ್ಪತ್ರೆಗೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದ್ದಾರೆ.

ಗುರುದಾಸ್ ಕಮತ್ ಸಾವು, ಗುರುದಾಸ್ ಕಮತ್ ಸತ್ತ, ಗುರುದಾಸ್ ಕಮಾತ್ ಡೈಸ್, ಗುರುದಾಸ್ ಕಮತ್ ಸಾವು

ವೃತ್ತಿಯಲ್ಲಿ ವಕೀಲರಾಗಿದ್ದ ಕಾಮತ್ ಅವರು, 1972 ರಲ್ಲಿ ವಿದ್ಯಾರ್ಥಿ ಕಾರ್ಯಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪೊದರ್ ಕಾಲೇಜ್​ನಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಸದಸ್ಯರಾಗಿ ಸೇರಿದರು. 1976 ರಲ್ಲಿ ಅವರು ಮುಂಬಯಿ ಎನ್ಎಸ್ಯುಐ ಅಧ್ಯಕ್ಷರಾಗಿ ನೇಮಕಗೊಂಡರು. ಗುರುದಾಸ್ ಕಾಮತ್  2009 ಹಾಗೂ 2011ರಲ್ಲಿ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಹಾಗೂ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 

2017ರಲ್ಲಿ ಕಾಂಗ್ರೆಸ್​ ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು. ಇವರ ಪ್ರಾಮಾಣಿಕತೆ, ಕಾರ್ಯದಕ್ಷತೆಯನ್ನು ಮನಗಂಡಿದ್ದ ಪಕ್ಷ ರಾಜೀನಾಮೆ ನಂತರವೂ ಕಾರ್ಯದರ್ಶಿ ಸ್ಥಾನದಲ್ಲಿ ಕಾಮತ್​ ನೀಡಿದರು.

 

Leave a Reply

Your email address will not be published.

Social Media Auto Publish Powered By : XYZScripts.com