ಸಾಮಾಜಿಕ ಜಾಲತಾಣದಲ್ಲಿ ನೆರೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ : ಡಿಕೆಶಿ

ಸಾಮಾಜಿಕ ಜಾಲತಾಣಗಳಲ್ಲಿ ನೆರೆ ವಿಚಾರವಾಗಿ ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ರಾಮನಗರದಲ್ಲಿ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಗರದ ಡಿಸಿ ಕಚೇರಿಯಲ್ಲಿಂದು ಕೊಡಗು ನೆರೆಸಂತ್ರಸ್ತರಿಗೆ ರಾಮನಗರ ಜಿಲ್ಲಾಡಳಿತದಿಂದ ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇನ್ನು ಅಗತ್ಯ ಆಹಾರ, ವಸ್ತು ಹಾಗೂ ಔಷಧಿ ಪದಾರ್ಥಗಳನ್ನ ಒಳಗೊಂಡ 5 ಕ್ಯಾಂಟರ್‌ಗಳ ಪಯಣಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವ್ರು ಡ್ಯಾಂಗಳ ಬಿರುಕಿನ ವಿಚಾರವಾಗಿ ಪ್ರತಿಕ್ರಿಯಿಸಿ ಯಾವ ಡ್ಯಾಂಗಳು ಬಿರುಕು ಬಿಟ್ಟಿಲ್ಲ, ಡ್ಯಾಂಗಳು ಬಿರುಕು ಬಿಟ್ಟಿವೆ ಎಂಬುದು ಸುಳ್ಳುಸುದ್ದಿ ಎಂದರು.

ಅಲ್ಲದೇ ವಂದತಿ ಹಬ್ಬಿಸುವವರ ವಿರುದ್ಧ ಸೈಬರ್ ಕ್ರೈಮ್‌ಗೆ ದೂರು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಈ ಬಗ್ಗೆ ಸಿಎಂ ಕುಮಾರಸ್ವಾಮಿ ಕೂಡ ರಿಪೋರ್ಟ್ ಕೇಳಿದ್ದಾರೆಂದು ತಿಳಿಸಿದ್ರು. ಇನ್ನು ನೆರೆಯಲ್ಲಿ ಸಿಲುಕಿರುವರ ರಕ್ಷಣೆ ನಡೆಯುತ್ತಿದ್ದು, ನಮ್ಮ ಅಧಿಕಾರಿಗಳ ತಂಡ ಯಶಸ್ವಿಯಾಗಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆಂದರು.

ಇನ್ನು ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದ್ದು, ಮಳೆ ನಿಂತ ಬಳಿಕ ಯೋಜನೆ ರೂಪಿಸಲಾಗುವುದು ಎಂದು ಹೇಳಿದ್ರು. ಈ ಬಗ್ಗೆ ಚೀಫ್ ಸೆಕ್ರೆಟರಿ ನೇತೃತ್ವದಲ್ಲಿ ಸಮಿತಿ ರಚಿಸಿ ಆಸ್ತಿಪಾಸ್ತಿಗಳ ನಷ್ಟ ವರದಿ ಬಳಿಕ ಪರಿಹಾರ ಘೋಷಣೆ ಮಾಡಲಾಗುವುದೆಂದು ತಿಳಿಸಿದ್ರು. ಇದೇ ವೇಳೆ ಕೊಡಗಿನ ನೆರೆಸಂತ್ರಸ್ತರಿಗೆ ನೆರವು ನೀಡುತ್ತಿರುವ ರಾಜ್ಯದ ಜನ್ರಿಗೆ ಕೃತಜ್ಞತೆ ಸಲ್ಲಿಸಿದ ಸಚಿವ ಡಿ.ಕೆ.ಶಿವಕುಮಾರ್ ಮುಂದಿನ ದಿನಗಳಲ್ಲಿ ನಮ್ಮ ಚುನಾಯಿತ ಪ್ರತಿನಿಧಿಗಳ ಸಂಬಳವನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು ಎಂದರು. ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ, ಎಡಿಸಿ ಡಾ. ಆರ್.ಪ್ರಶಾಂತ್, ಎಸ್‌ಪಿ ರಮೇಶ್ ಬಾನೋತ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com