Cricket : 3ನೇ ಟೆಸ್ಟ್ – ಭಾರತಕ್ಕೆ 203 ರನ್ ಭರ್ಜರಿ ಜಯ : ಕೊಹ್ಲಿ ಪಂದ್ಯಶ್ರೇಷ್ಟ

ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧ 203 ರನ್ ಅಂತರದಿಂದ ಭರ್ಜರಿ ಜಯ ಗಳಿಸಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್ ಗೆ ತಿರುಗೇಟು ನೀಡುವಲ್ಲಿ ಕೊಹ್ಲಿ ಪಡೆ ಸಫಲವಾಗಿದ್ದು, ಸರಣಿ 2-1 ಆಗಿದೆ.

ಗೆಲ್ಲಲು 522 ರನ್ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ಬುಧವಾರ ಐದನೇ ದಿನದಾಟದಲ್ಲಿ 317ಕ್ಕೆ ಆಲೌಟ್ ಆಯಿತು. ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ 5, ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ 1, ಹಾರ್ದಿಕ್ ಪಾಂಡ್ಯ 1, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಇಂಗ್ಲೆಂಡ್ ಪರವಾಗಿ ಜೋಸ್ ಬಟ್ಲರ್ 106, ಬೆನ್ ಸ್ಟೋಕ್ಸ್ 62, ಆದಿಲ್ ರಾಶಿದ್ 33 ರನ್ ಗಳಿಸಿದರು.

ಎರಡೂ ಇನ್ನಿಂಗ್ಸ್ ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com