Cricket : ಟ್ರೆಂಟ್‍ಬ್ರಿಡ್ಜ್ ಟೆಸ್ಟ್ ಗೆಲುವನ್ನು ಪ್ರವಾಹ ಸಂತ್ರಸ್ತರಿಗೆ ಸಮರ್ಪಿಸಿದ ಕ್ಯಾಪ್ಟನ್ ಕೊಹ್ಲಿ..!

ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧ 203 ರನ್ ಅಂತರ ಭರ್ಜರಿ ಜಯ ಗಳಿಸಿದೆ. ಟೀಮ್ ಇಂಡಿಯಾದ ಈ ಗೆಲುವನ್ನು ನಾಯಕ ವಿರಾಟ್ ಕೊಹ್ಲಿ ಕೇರಳ ಪ್ರವಾಹ ಸಂತ್ರಸ್ತರಿಗೆ ಸಮರ್ಪಿಸಿಸಿದ್ದಾರೆ.

ಪಂದ್ಯಶ್ರೇಷ್ಟ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರಾಟ್ ಕೊಹ್ಲಿ ‘ ಈ ಗೆಲುವನ್ನು ಕೇರಳದಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಮರ್ಪಿಸುತ್ತೇನೆ. ನೆರೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ನಮ್ಮ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೋಸ್ಕರ ಟೀಮ್ ಇಂಡಿಯಾ ಪರವಾಗಿ ನಾವು ಇಷ್ಟನ್ನು ಮಾಡಬಹುದಾಗಿದೆ ‘ ಎಂದು ಹೇಳಿದ್ದಾರೆ.

Image result for kohli dedicates win flood

ಈ ಗೆಲುವಿನ ಮೂಲಕ ಇಂಗ್ಲೆಂಡ್ ಗೆ ತಿರುಗೇಟು ನೀಡುವಲ್ಲಿ ಕೊಹ್ಲಿ ಪಡೆ ಸಫಲವಾಗಿದ್ದು, ಸರಣಿ 2-1 ಆಗಿದೆ. ಗೆಲ್ಲಲು 522 ರನ್ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ಬುಧವಾರ ಐದನೇ ದಿನದಾಟದಲ್ಲಿ 317ಕ್ಕೆ ಆಲೌಟ್ ಆಯಿತು.

ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ 5, ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ 1, ಹಾರ್ದಿಕ್ ಪಾಂಡ್ಯ 1, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಇಂಗ್ಲೆಂಡ್ ಪರವಾಗಿ ಜೋಸ್ ಬಟ್ಲರ್ 106, ಬೆನ್ ಸ್ಟೋಕ್ಸ್ 62, ಆದಿಲ್ ರಾಶಿದ್ 33 ರನ್ ಗಳಿಸಿದರು.

 

One thought on “Cricket : ಟ್ರೆಂಟ್‍ಬ್ರಿಡ್ಜ್ ಟೆಸ್ಟ್ ಗೆಲುವನ್ನು ಪ್ರವಾಹ ಸಂತ್ರಸ್ತರಿಗೆ ಸಮರ್ಪಿಸಿದ ಕ್ಯಾಪ್ಟನ್ ಕೊಹ್ಲಿ..!

Leave a Reply

Your email address will not be published.

Social Media Auto Publish Powered By : XYZScripts.com