ಬೆಳಗಾವಿ : ಕೊಡಗು ಸಂತ್ರಸ್ತರ ನೆರವಿಗೆ ರಸ್ತೆಗಿಳಿದು ಹಣ ಸಂಗ್ರಹಿಸಿದ ಮಠಾಧೀಶರು..!

ಬೆಳಗಾವಿ:  ಮಹಾಮಳೆಗೆ ತತ್ತರಿಸಿಹೋದ ಕೊಡಗಿನ ಜನರಿಗೆ ಎಲ್ಲೆಡೆ ಪರಿಹಾರದ ಮಹಾಪೂರವೇ ಹರಿದುಬರುತ್ತಿದ್ದು, ಚಿತ್ರರಂಗದವರು ಸಹಾಯ ಮಾಡಿದ್ದು, ರಾಜಕೀಯದಲ್ಲಿ ಸಚಿವರೆಲ್ಲಾ ತಮ್ಮ ಒಂದು ತಿಂಗಳ ಸಂಬಳವನ್ನು ನೀಡುವುದಾಗಿ ಹೇಳಿದ್ದಾರೆ. ಉತ್ತರಕರ್ನಾಟಕದಲ್ಲಿ ಸ್ವಾಮಿಜಿಗಳು ಜೋಳಿಗೆ ಹಿಡಿದ್ದು ಕೊಡಗಿನ ಸಂತ್ರಸ್ತರಿಗೆ ಹಣ ಸಂಗ್ರಹಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಜೋಳಿಗೆ ಹಿಡಿದು ಜನರ ಬಳಿ ಹಣ ಸಂಗ್ರಹಿಸುತ್ತಿರುವ ಮಠಾಧೀಶರು, ಅಷ್ಟೇ ವಿನಯದಿಂದ ಧನ ಸಹಾಯ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕ ಅಭಿವೃದ್ಧಿ ಪಡಿಸಿ ಎಂದು ನಡೆಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಠಾಧೀಶರು ಇಂದು ಕೊಡುಗು ಸಂತ್ರಸ್ಥರ ನೆರವಿಗೆ ಧಾವಿಸಿದ್ದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ನಿಡಸೋಶಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ಹಾಗೂ ವಿವಿಧ ಮಠಾಧೀಶರು ಹುಕ್ಕೇರಿ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಕೊಡುಗು ಸಂತ್ರಸ್ತರಿಗಾಗಿ ಹಣ ಸಂಗ್ರಹಿಸಿದರು.

ಇನ್ನು ಈ ಬಗ್ಗೆ ಮಾತನಾಡಿದ ಸ್ವಾಮೀಜಿಗಳು, ದೇವರಿಗೆ ದುಡ್ಡು ಖರ್ಚು ಮಾಡಿ ಅಭಿಷೇಕ ಮಾಡಿಸುವುದು ಕೇವಲ ನಮ್ಮ ಶಾಂತಿಗಾಗಿ ಆದರೆ ಇಂತಹ ಕಾರ್ಯ ಮಾಡುವುದು ಸಮಾಜದ ಒಳಿತಿಗಾಗಿ ಅಂತ ಹೇಳಿದ್ರು. ಕೊಡುಗು ನೆರೆ ಸಂತ್ರಸ್ಥರ ನೆರವಿಗೆ ಮುಂದಾದ ಮಠಾಧೀಶರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಮಠಾಧೀಶರು ಆರಂಭಿಸಿರುವ ಈ ಕಾರ್ಯ ಇತರರಿಗೂ ಮಾದರಿಯಾಗಿದ್ದೂ ಇನ್ನೂ ಹೆಚ್ಚಿನ ಪ್ರಮಾಣದ ನೆರವು ಸಂತ್ರಸ್ಥರಿಗೆ ಸಿಗುವಂತಾಗಲಿ ಎಂಬುವದೆ ನಮ್ಮ ಆಶಯ. ಎಂದು ತಿಳಿಸಿದ್ದಾರೆ.

ಕೊಡಗಿನ ಜನತೆಗಾಗಿ ಹುಕ್ಕೇರಿ ತಾಲೂಕಿನ ಮಠ ಮಾನ್ಯಗಳ ಸ್ವಾಮೀಜಿಗಳು ನಿಧಿ ಸಂಗ್ರಹಕ್ಕೆ ಮುಂದಾಗಿದ್ದು ಕೇವಲ ಒಂದು ಗಂಟೆಯಲ್ಲಿ 2ಲಕ್ಷಕ್ಕೂ ಅಧಿಕ ಹಣವನ್ನು ಸ್ವಾಮೀಜಿಗಳು ಸಂಗ್ರಹ ಮಾಡಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಎಲ್ಲ ರಾಜಕಾರಣಿಗಳು ಕೊಡಗಿನ ಜನತೆಯ ಪುನರುಜ್ಜೀವನಕ್ಕೆ ಮುಂದಾಗಬೇಕು ಎಂದು ಸ್ವಾಮೀಜಿಗಳು ಆಗ್ರಹಿಸಿದರು.

 

Leave a Reply

Your email address will not be published.