ತ್ಯಾಗ ಬಲಿದಾನದ ಸಂಕೇತ ಬಕ್ರಿದ್​ : ಈ ಹಬ್ಬವನ್ನು ಆಚರಿಸಲು ಕಾರಣವೇನು…? ಇಲ್ಲಿದೆ ವಿವರ

ಮಾನವೀಯ ಮೌಲ್ಯಗಳು ನಿರಂತರ ಕುಸಿಯುತ್ತಿರುವ ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಈ ಹಬ್ಬವು ಮಾನವೀಯ ಏಕತೆಯ ಸಂದೇಶವನ್ನು ಸಾರುವುದರ ಜೊತೆಗೆ ತಂದೆ ಮತ್ತು ಮಗನು ಅಲ್ಲಾಹನ ಆಜ್ಞೆಯನ್ನೂ ಪಾಲಿಸುವುದಕ್ಕೆ ಮಹಾನ್ ತ್ಯಾಗವೊಂದಕ್ಕೆ ಸನ್ನದ್ಧರಾದ ಘಟನೆಯಿಂದ ಈ ಬಕ್ರಿದ್​ ಹಬ್ಬ ಹುಟ್ಟಿಕೊಂಡಿದೆ.

bakrid celebrated ಗೆ ಚಿತ್ರದ ಫಲಿತಾಂಶ

ಬಕ್ರಿದ್​ ಆಚರಣೆಗೆ ನಾಲ್ಕು ವರ್ಷ ಸಾವಿರ ಹಿಂದಿನ ಇತಿಹಾಸವಿದ್ದು, ಇದೊಂದು ಪುಟ್ಟ ಕತೆ ಬಕ್ರಿದ್​ಗೆ ಸಾಕ್ಷಿಯಾಗಿದೆ. ಮಗನ ಮೇಲೆ ತಂದೆ ಇಬ್ರಾಹಿಂ ನೆಬಿ ಅಪಾರವಾದ ಪ್ರೀತಿ ಮಮತೆಯಿಂದ ಕಾಲ ಕಳೆಯುತ್ತಿದ್ದಾಗ ಒಂದು ದಿನ ಕನಸ್ಸಿನಲ್ಲಿ ಅಲ್ಲಾಹನು ನಿನ್ನ ಪ್ರೀತಿಯ ಪುತ್ರನನ್ನು ನನಗೆ ಬಲಿಯರ್ಪಿಸು ಎಂದು ಕನಸಿನಲ್ಲಿ ಅಲ್ಲಾ ಹೇಳುತ್ತಾರೆ. ಮರುದಿನ ಆ ತಂದೆಗೆ ಬೆಳಗ್ಗೆ ಎದ್ದು ಎಚ್ಚರವಾದಾಗ ಮತ್ತೆ ಮತ್ತೆ ಇಬ್ರಾಹಿಂ ನೆಬಿಯವರು  ಆ ಕನಸಿನ ಬಗ್ಗೆ ಯೋಚನಾ ಮಗ್ನರಾಗುತ್ತಾರೆ. ಇದು ಇಬ್ಲೀಸನ ಕನಸಾಗಿರಬಹುದೆಂದು ಸುಮ್ಮನಾದರು. ಮರುದಿನ ಮತ್ತೆ ಇದೇ ಕನಸು ಬಿದ್ದಾಗ ತನ್ನ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದಾಗ ಹಿಂದೊಮ್ಮೆ ಅಲ್ಲಾಹನ ಹಲವು ಪರೀಕ್ಷೆಗೊಳಗಾದಾಗ ಇಬ್ರಾಹಿಂ ನೆಬಿ ಯವರು ನಾನು ಅಲ್ಲಾಹನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿರುವುದು ನೆನಪಾಗುತ್ತದೆ.

ಸಂಬಂಧಿತ ಚಿತ್ರ

ತನ್ನ ಪತ್ನಿಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಒಮ್ಮೆ ಪತ್ನಿ ದಿಗ್ಭ್ರಮೆಗೊಂಡರು. ಮತ್ತು ಎಚ್ಚೆತ್ತು ಇದು ಅಲ್ಲಾಹನ ಆಜ್ಞೆ ಎಂದು ಉದಾರ ಮನೋಭಾವದಿಂದ ಈ ಆಳವಾದ ಮನಸ್ಸಿನ ದುಃಖದೊಂದಿಗೆ ತಂದೆ ಮತ್ತು ತಾಯಿ ಇಬ್ಬರು ಮಗನೊಂದಿಗೆ ತನ್ನ ಕನಸಿನ ಬಗ್ಗೆ ಪ್ರಸ್ತಾಪಿಸಿದರು. ದೇವ ಭಕ್ತಿಯಲ್ಲಿ ತಂದೆಯಷ್ಟೇ ನಿಸ್ಸೀಮರಾಗಿದ್ದ ವಿಧೇಯತೆಯ ಸಾಕಾರ ಮೂರ್ತಿಯಾಗಿದ್ದ ಮಗ ಇಸ್ಮಾಯಿಲ್ (ಅ) ಅಪ್ಪಾ ತಮಗೆ ಅಲ್ಲಾಹನು ಆಜ್ಞಾಪಿಸಿರುವುದನ್ನು ತಾವು ಮಾಡಿರಿ. ಅಲ್ಲಾಹನಿ ನಿಚ್ಚಿಸಿದರೆ ತಾವು ನನ್ನನ್ನು ಸಹನಶೀಲರಾಗಿ ಕಾಣುವಿರಿ ಎಂದು ಹೇಳುತ್ತಾ ಕೂಡಲೇ ಸಮ್ಮತಿಯಿತ್ತರು. ತಂದೆ ಮಗ ಇಬ್ಬರೂ ದೇವೆಚ್ಚೆಯನ್ನು ಸಾಕ್ಷಾತ್ಕರಿಸುವ ತ್ಯಾಗವೊಂದಕ್ಕೆ ಇತಿಹಾಸದಲ್ಲೇ ಸರಿ ಸಾಟಿಯಿಲ್ಲದೆ ಮಹಾನ್ ತ್ಯಾಗವೊಂದಕ್ಕೆ ಸನ್ನದ್ಧರಾದರು.ಸಂಬಂಧಿತ ಚಿತ್ರಆ ಸಂದರ್ಭದಲ್ಲಿ ಪುತ್ರ ಇಸ್ಮಾಯಿಲ್ ತಂದೆ ಇಬ್ರಾಹಿಂನಲ್ಲಿ ಅಪ್ಪಾ ನೀವು ನನ್ನನ್ನು ಬಲಿ ನೀಡುವಾಗ ನನ್ನ ಬಟ್ಟೆಗೆ ರಕ್ತವಾಗದಂತೆ ಜಾಗ್ರತೆ ವಹಿಸಿರಿ. ಯಾಕೆಂದರೆ ಆ ಬಟ್ಟೆಯನ್ನು ನನ್ನ ತಾಯಿ ನೋಡಿ ಸಂಕಟ ಪಡುವರು ಮತ್ತು ನನ್ನ ಮುಖವನ್ನು ನಿಮಗೆ ಕಾಣದಂತೆ ಭೂಮಿಯ ಕೆಳಭಾಗಕ್ಕೆ ಸರಿಸಿ ಮಲಗಿಸಿ. ಯಾಕೆಂದರೆ ನನ್ನ ಮೇಲಿನ ಮಮತೆಯಿಂದ ನನ್ನ ಮುಖ ಕಂಡು ನಿಮಗೆ ಈ ಮಹತ್ತರವಾದ ಕಾರ್ಯ ನೆರವೇರಿಸಲು ಕಷ್ಟವಾಗಬಹುದು ಎಂಬ ಮಾತು ಮಗನಿಂದ ಕೇಳಿದ ಅಪ್ಪಾ ಇಬ್ರಾಹಿಂ ನೆಬಿಯವರು ದುಃಖದಿಂದ ಗದ್ಗದಿತರಾ ದರು. ತಕ್ಷಣ ಎಚ್ಚೆತ್ತು ಕೊಂಡು ಮಗನ ವಾತ್ಸಲ್ಯದಿಂದ ದೇವೆಚ್ಚೆಗೆ ಅಡ್ಡಿಯಾಗಬಾರದೆಂದು ಮನಸ್ಸಿನಲ್ಲಿ ಸಮಾಧಾನಿಸಿ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಮಗ ಇಸ್ಮಾಯಿಲ್‌ರ ಕೊರಳನ್ನು ಹರಿತವಾದ ಕತ್ತಿಯಿಂದ ಕೊಯ್ಯಲಾರಂಭಿಸಿದರು. ಮತ್ತು ತಕ್ಬೀರ್ ಧ್ವನಿಯನ್ನು ಮೊಳಗಿಸಿದಾಗ ಕುತ್ತಿಗೆಯು ಕೊಯ್ಯಲ್ಪಡುವುದಿಲ್ಲ , ಏನಾಶ್ಚರ್ಯ ! ಹರಿತವಾದ ಕತ್ತಿಯನ್ನು ಇಬ್ರಾಹಿಂ ನೆಬಿಯವರು ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿದರೂ ಕುತ್ತಿಗೆ ಕೊಯ್ಯಲ್ಪಡುವುದಿಲ್ಲ. ಇಬ್ರಾಹಿಂ ನೆಬಿಯವರು ಕೋಪದಿಂದ ತನ್ನ ಕೈಯಲ್ಲಿದ್ದ ಚೂರಿಯನ್ನು ಸಮೀಪದಲ್ಲಿರುವ ಕಲ್ಲಿನ ಮೇಲೆ ಹೊಡೆಯುತ್ತಾರೆ. ಕಲ್ಲು ಎರಡು ತುಂಡಾಗುತ್ತದೆ. ಅಲ್ಲಾಹನು ಇಸ್ಮಾಯಿಲ್ ರವರ ಜಾಗದಲ್ಲಿ ಪವಾಡ ಸದೃಶವಾಗಿ ಆಡನ್ನು ಪ್ರತ್ಯಕ್ಷಗೊಳಿಸುತ್ತಾನೆ ಮತ್ತು ತಕ್ಷಣ ಅಲ್ಲಾಹನ ದೇವದೂತರು ಪ್ರತ್ಯಕ್ಷರಾಗಿ ಇಬ್ರಾಹಿಂ ತನ್ನ ಒಡೆಯನಿಗೆ ನಿಮ್ಮ ಮಗನ ಬಲಿ ಬೇಕಾಗಿರಲಿಲ್ಲ. ಆದರೆ ಇದು ನಿಮ್ಮ ಮತ್ತು ಅಲ್ಲಾಹನ ನಡುವೆ ಇರುವ ಪರೀಕ್ಷೆಯಾಗಿತ್ತು. ನೀನು ಅಲ್ಲಾಹನ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದ್ದರಿಂದ ನಿನ್ನ ಮಗನ ಬದಲು ಇಗೋ ಈ ಆಡನ್ನು ಬಲಿಕೊಡು ಎಂಬ ಅಲ್ಲಾಹನ ಆಜ್ಞೆಯಾದಾಗ ಇಬ್ರಾಹಿಂ ಮತ್ತೆ ಚೂರಿಯನ್ನೆತ್ತಿ ಆಡನ್ನು ಕೊಯ್ಯುತ್ತಾರೆ ಆ ದಿನವನ್ನು ಮುಸ್ಲಿಂ ಭಾಂದವರು ಬಕ್ರಿದ್​ ಎಂದು ಆಚರಿಸುತ್ತಾರೆ.ಸಂಬಂಧಿತ ಚಿತ್ರದೇವಾಜ್ಞೆಯ ಈಡೇರಿಕೆಗಾಗಿ ಇಳಿವಯಸ್ಸಿನಲ್ಲಿ ಆಧಾರವಾಗಬಹುದಾಗಿದ್ದ ಪ್ರೀತಿಯ ಪುತ್ರನನ್ನು ಬಲಿ ನೀಡಲು ಸಿದ್ಧರಾದ ಈ ಘಟನೆಯ ಸಂಕೇತವಾಗಿ ಬಕ್ರಿದ್ ಹಬ್ಬದ ಸಲುವಾಗಿ ಪ್ರಾಣಿ ಬಲಿಯನ್ನು ನಿರ್ವ ಹಿಸುವುದರ ಮೂಲಕ ಮನುಷ್ಯ ದೇವಾದೇಶಗಳಿಗೆ ಆದ್ಯತೆ ನೀಡಬೇಕೆಂಬ ಕರೆಯನ್ನು ಬಕ್ರಿದ್ ಹಬ್ಬ ಸಾರುತ್ತದೆ. ಹಜ್ಜ್ ನೆರವೇರಿಸುವುದು ಮತ್ತು ಸಫಾ ಮತ್ತು ಮರ್ವಾ ಕಣಿವೆಯಲ್ಲಿ ಏಳು ಬಾರಿ ಓಡುವುದು ಪ್ರಾಣಿ ಬಲಿ ನೀಡುವುದು ಮುಂತಾದ ಹಲವು ಕರ್ಮಗಳನ್ನು ನೆರವೇರಿಸುವುದರ ಮೂಲಕ ಸ್ವತಃ ಇಬ್ರಾಹಿಂ ನೆಬಿಯವರು ನಿರ್ಮಾಣ ಮಾಡಿದ ಆ ಭವ್ಯ ಭವನಕ್ಕೂ ಹೋಗಿ ಪ್ರಾರ್ಥಿಸಿ ವ್ಯಕ್ತಿ ತನ್ನ ಎಲ್ಲಾ ಪಾಪಗಳನ್ನು ಶುದ್ಧೀಕರಿಸುವುದೇ ಬಕ್ರಿದ್ ಹಬ್ಬದ ಪ್ರಮುಖ ಅಂಶವಾಗಿದೆ.ಸಂಬಂಧಿತ ಚಿತ್ರ

ಬಕ್ರಿದ್​ ಹಬ್ಬದಂದು ಮುಂಜಾನೆಯ ಪ್ರಾರ್ಥನೆ ಮಾಡಿ ಬೆಳಗ್ಗೆ ಊರಿನ ಜನರೆಲ್ಲರೂ ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ಈದ್ಗಾ ವ್ಯವಸ್ಥೆ ಇಲ್ಲದ ಊರಿನಲ್ಲಿ ಪ್ರಮುಖ ಮಸೀದಿಗಳಲ್ಲಿಯೇ ಈದ್ ಪ್ರಾರ್ಥನೆಯನ್ನು ಮಾಡುತ್ತಾರೆ. ತೆರೆದ ಮೈದಾನದಲ್ಲಿ ಊರಿನ ಅಷ್ಟೂ ಜನರು ಒಂದಾಗಿ ಈದ್ ನಮಾಜ್ ನಿರ್ವಹಿಸುವ ಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಸೀದಿಯಲ್ಲಿ ಮೊದಲೇ ನಿರ್ಣಯಿಸಿದ ಸಮಯಕ್ಕೆ ಎಲ್ಲರೂ ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಾರೆ. ನಮಾಜ್ ಬಳಿಕ ಎಲ್ಲರ ಶುಭಾಶಯ ಕೋರುತ್ತಾರೆ. bakrid 2018 ಗೆ ಚಿತ್ರದ ಫಲಿತಾಂಶಈದ್ ನಮಾಜ್ ಬಳಿಕ ನಾಲ್ಕು ಕಾಲುಗಳ್ಳ ಪ್ರಾಣಿಯೊಂದನ್ನು ಬಲಿ ನೀಡಲಾಗುತ್ತದೆ. ಆದ್ರೆ ಕುರ್ಬಾನಿಗೆ ಪ್ರಾಣಿಗಳನ್ನು ಬಳಸುವಾಗ ಕೆಲವು ಮಾನದಂಡಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಬಲಿ ನೀಡುವ ಪ್ರಾಣಿಗೆ ಯಾವುದೇ ರೀತಿಯಲ್ಲಿ ಗಾಯಗೊಂಡಿರಬಾರದು ಅಥವಾ ಸಾವಿನ ಸ್ಥಿತಿಯಲ್ಲಿರಬಾರದು ಎಂಬ ಇತ್ಯಾದಿ ಮಾನದಂಡಗಳನ್ನು ಅವಶ್ಯಕವಾಗಿ ಕುರ್ಬಾನಿ ನೀಡುವವರು ಪಾಲಿಸಬೇಕಾಗುತ್ತದೆ. ಕುರ್ಬಾನಿಯ ಬಳಿಕ ದೊರಕುವ ಮಾಂಸದಲ್ಲಿ ಮೂರು ಪಾಲು ಮಾಡಲಾಗುತ್ತದೆ. ಒಂದು ಪಾಲು ಬಡವರಿಗೆ, ಇನ್ನೊಂದು ಸಂಬಂಧಿಕರಿಗೆ ಮತ್ತು ಮೂರನೆಯ ಪಾಲನ್ನು ಸ್ವಂತಕ್ಕಾಗಿ ಎಂದು ವಿಂಗಡಿಸಲಾಗುತ್ತದೆ.

Leave a Reply

Your email address will not be published.