ಮುಂಬೈ : ಬಹುಮಹಡಿ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ : 2 ಸಾವು, 14 ಮಂದಿಗೆ ಗಾಯ..!

ಮುಂಬೈ : ಜನವಸತಿ ಕಟ್ಟಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 14 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟದ ರಾಜಧಾನಿಯಲ್ಲಿರುವ ದಾದರ್​ನ ಕ್ರಿಸ್ಟಲ್​ ಟವರ್​ನಲ್ಲಿ ನಡೆದಿದೆ.

ಕ್ರಿಸ್ಟೆಲ್​ ಟವರ್​ನಲ್ಲಿ ಬಹುಮಹಡಿ ಕಟ್ಟಡದ 12ನೇ ಅಂತಸ್ಥಿನಲ್ಲಿ ಇಂದು ಬೆಳಗ್ಗೆ 8.30ಕ್ಕೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಟವರ್​ನಲ್ಲಿ ಬೆಂಕಿ ಹತ್ತಿಕೊಂಡಿದ್ದನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. 12ನೇ ಮಹಡಿಗೆ ತಗುಲಿದ ಬೆಂಕಿ 13,14 ಮತ್ತು 15ನೇ ಮಹಡಿವರೆಗೂ ಹಬ್ಬಿದ್ದು, ಈ ಅವಘಡದಿಂದ ಇಬ್ಬರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು 4ನೀರಿನ  ಟ್ಯಾಂಕ್​ಗಳ ಮೂಲಕ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಸಿಬ್ಬಂದಿಗಳು  ತೊಡಗಿದ್ದರು.  ಘಟನೆಯಿಂದಾಗಿ 14ಕ್ಕೂ ಅನೇಕ ಮಂದಿ ಸಿಲುಕಿದ್ದಾರೆಂದು ತಿಳಿದುಬಂದಿದ್ದು, ಅವರನ್ನು ರಕ್ಷಿಸುವಲ್ಲಿ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಗಾಯಾಳುಗಳನ್ನು ಕೆ.ಇ.ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

 

One thought on “ಮುಂಬೈ : ಬಹುಮಹಡಿ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ : 2 ಸಾವು, 14 ಮಂದಿಗೆ ಗಾಯ..!

Leave a Reply

Your email address will not be published.

Social Media Auto Publish Powered By : XYZScripts.com