ಶಿವಮೊಗ್ಗ ಕಾಂಗ್ರೆಸ್ ನಲ್ಲಿ ಮರುಕಳಿಸಿದ ಭಿನ್ನಮತ : ಟಿಕೆಟ್ ವಂಚಿತ ಅಭ್ಯರ್ಥಿಗಳ ಕಿತ್ತಾಟ..!

ಶಿವಮೊಗ್ಗ ಕಾಂಗ್ರೆಸ್ನಲ್ಲೀಗ ಭಿನ್ನಮತ ಮರುಕಳಿಸಿದೆ. ಮಹಾನಗರ ಪಾಲಿಕೆ ಚುನಾವಣೆಗೆ ಟಿಕೇಟ್ ವಂಚಿತ ಅಭ್ಯರ್ಥಿಗಳೀಗ ಕಿತ್ತಾಟ ಆರಂಭಿಸಿದ್ದಾರೆ. ಶಿವಮೊಗ್ಗ ಪಾಲಿಕೆ ಚುನಾವಣೆ ಸ್ಥಳಿಯ ರಾಜಕೀಯ ವಲಯದಲ್ಲಿ ಕಾವೇರಿಸಿದೆ. ಬಿಜೆಪಿಯಲ್ಲಿ ಟಿಕೇಟ್ ಗಾಗಿ ಸ್ಫೋಟಗೊಂಡಿರುವ ಭಿನ್ನಮತದ ಬೆಂಕಿ‌ ಇದೀಗ ಕಾಂಗ್ರೆಸ್ ವಲಯದಲ್ಲೂ ಹೊತ್ತಿ ಉರಿಯಲಾರಂಭಿಸಿದೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಕಾಂಗ್ರೆಸ್ 25 ವಾರ್ಡ್ಗಳಿಗೂ ಅಭ್ಯರ್ಥಿಗ‌ಳ ಪಟ್ಟಿ ಬಹಿರಂಗೊಳಿಸಿದೆ..ಭಿನ್ನಮತ ಭುಗಿಲೇಳುವ ಸೂಚನೆ ಸಿಗುತ್ತಿದ್ದಂತೆಯೇ ಸ್ಥಳಿಯ ಕಾಂಗ್ರೆಸ್ ನಾಯಕರು ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಸದ್ದುಗದ್ದಲವಿಲ್ಲದೇ ಬಿ.ಫಾರಂ ನೀಡಿತ್ತು..ಮಾಧ್ಯಮ‌ಹೇಳಿಕೆವರೆಗೂ ಇದನ್ನು ಗುಪ್ತವಾಗಿಡಲಾಗಿತ್ತು..ಗುಪ್ತವಾಗಿ ಬಿ.ಫಾರಂ ವಿತರಿಸಿದ್ದಕ್ಕೆ ಟಿಕೇಡ್ ವಂಚಿತರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ….ಸುದ್ದಿಗೋಷ್ಠಿ ಮಧ್ಯೆಯೇ ಪಟ್ಟಿ ಬಿಡುಗಡೆಗೊಳಿಸಿದ ಚುನಾವಣಾ ಉಸ್ತುವಾರಿ ನಾರಾಯಣಸ್ವಾಮಿ ಪಟ್ಟಿಯಲ್ಲಿ ಮತ್ತೆ ಬದಲಾಗಲಿದೆ. 27ನೇ ನೇ ವಾರ್ಡಿಗೆ ಅಭ್ಯರ್ಥಿ ಬದಲಾಗಲಿದ್ದಾರೆ ಎಂದರು.

ನಾರಾಯಣಸ್ವಾಮಿ, ಶಿವಮೊಗ್ಗ‌ಪಾಲಿಕೆ ಚುನಾವಣಾ‌ ಕಾಂಗ್ರೆಸ್ ಉಸ್ತುವಾರಿ ಪಟ್ಟಿಬಿಡುಗಡೆಗೊಳಿಸಿ ಹರಬರುತ್ತಿದ್ದಂತೆ ವಾರ್ಡ್ ೩೧ ಟಿಕೇಟ್ ವಂಚಿತ ರಿಯಾಜ್ ಮಾಜಿ ಶಾಸಕ ಪ್ರಸನ್ನಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ‘ ಬಿಜೆಪಿ ಜೊತೆ ಒಳೊಪ್ಪಂದ ಮಾಡಿಕೊಂಡಿರುವ ಪ್ರಸನ್ನಕುಮಾರ್ ತಮಗೆ ಅನ್ಯಾಯ ಮಾಡಿದ್ದಾರೆ ‘ ಎಂದು ರಸ್ತೆ ಮಧ್ಯೆಯೇ ಹರಿಹಾಯ್ದಿದ್ದಾರೆ.

ವಿಧಾನಸಭೆ ಚುನಾವಣೆ ವೇಳೆಗೆ ಕೆಲವರನ್ನು ವಾರ್ಡ್ ಟಿಕೇಟ್ ನೀಡೋ ಭರವಸೆ ನೀಡಿ ಹಲವರನ್ನು ಕಾಂಗ್ರೆಸ್ಗೆ ಕರೆತರಲಾಗಿತ್ತು. ಆದರೀಗ ಅವರಲ್ಲಿ ಬಹುತೇಕರಿಗೆ ಟಿಕೇಟ್ ತಪ್ಪಿದೆ. ಕಾಂಗ್ರೆಸ್ ಭಿನ್ನಮತದ ಲಾಭ ಅನ್ಯಪಕ್ಷವಾಗಲಿದೆ ಅಂತ ಹೇಳಲಾಗುತ್ತಿದೆ.

 

 

Leave a Reply

Your email address will not be published.