ಅಚಾನಕ್ಕಾಗಿ ಸಚಿವರಾಗಿದ್ದರಿಂದ ರೇವಣ್ಣಗೆ ದುರಹಂಕಾರ ಬಂದಿದೆ : ಪ್ರಹ್ಲಾದ್​ ಜೋಶಿ

ಧಾರವಾಡ : ಇವತ್ತಿನ ಸರ್ಕಾರದಲ್ಲಿ ಸಚಿವ ರೇವಣ್ಣ ಅಚಾನಕ್ಕಾಗಿ ಸಚಿವರಾಗಿದ್ದರಿಂದ ದುರಹಂಕಾರ ಬಂದಿದೆ ಎಂದು ಧಾರವಾಡದಲ್ಲಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಸಚಿವ ರೇವಣ್ಣ ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್​ ಹಂಚುವಾಗ ಜನರ ಕೈಗೆ ಕೊಡವ ಬದಲು ಬಿಸ್ಕೆಟ್​ಅನ್ನು ಎಸೆದು ಅಮಾನವೀಯತೆ ಮೇರೆದಿದ್ದಾರೆ. ಈ ವಿಷಯ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಮಾತನಾಡಿದ ಧಾರವಾಡ ಸಂಸದ ಪ್ರಹ್ಲಾದ್​ ಜೋಶಿ,  ಇವತ್ತಿನ ಸರ್ಕಾರದಲ್ಲಿ ಅವರು ಅಚಾನಾಕ್ಕಾಗಿ ಸಚಿವರಾಗಿದ್ದರಿಂದ ದುರಹಂಕಾರ ಬಂದಿದೆ. ಈ ಮೊದಲು ಉತ್ತರಕರ್ನಾಟಕದ ಜನರ ಬಗ್ಗೆ ಅಸಡ್ಡೆ ತೋರಿರೋದು ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಹೋದಾಗ ನಡೆದುಕೊಂಡ ರೀತಿ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

prahlad joshi ಗೆ ಚಿತ್ರದ ಫಲಿತಾಂಶ

ಮಂತ್ರಿಗಳಾದವರು ಈ ರೀತಿ ನಡೆದುಕೊಳ್ಳಬಾರದು, ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸ್ತಾರೆ ಅಂತಾ ಭಾವಿಸಿದ್ದೇನೆ. ಈಗಾಗಲೇ ನಮ್ಮ ನಾಯಕರು ಯಡಿಯೂರಪ್ಪ ಹಾಗೂ ಅಲ್ಲಿನ ಸ್ಥಳೀಯ ಶಾಸಕರು ನೆರೆ ಸಂತ್ರಸ್ತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದ್ರೇ, ಅಲ್ಲಿನ ಜನರಿಗೆ ಸರಿಯಾದ ವ್ಯವಸ್ಥೆ ಆಗಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು, ಸಚಿವರೇ ಈ ರೀತಿ ನಡೆದು ಕೊಂಡರೆ ಅಧಿಕಾರಿಗಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತೆ. ಅಲ್ಲಿರುವವರು ನಮ್ಮ ನಾಗರಿಕರು ನಮ್ಮ ಬಂಧುಗಳೇ, ಅವರನ್ನ ಅತ್ಯಂತ ಗೌರವದಿಂದ ಕಾಣುವಂತದ್ದು ಸರ್ಕಾರದ ಕತ೯ವ್ಯ ಎಂದು ತಿಳಿಸಿದ್ದಾರೆ

ನಮ್ಮ ಭಾಗದಿಂದ ಅಗತ್ಯವಿರುವ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ನಮ್ಮ ಕಡೆಯಿಂದ ಏನೇನು ಸಾಹಯ ಮಾಡಲು ಸಾಧ್ಯವೋ, ಅದೆಲ್ಲವನ್ನೂ ನಮ್ಮ ಶಾಸಕರು ಸೇರಿ ಮಾಡ್ತೇವೆ. ಅಲ್ಲಿಗೆ ಭೇಟಿ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸಂಸದರು, ಭೇಟಿ ನೀಡುವುದರಿಂದ ಪರಿಹಾರ ನೀಡಲಿಕ್ಕೆ ತೊಂದರೆಯಾಗುತ್ತೆ. ಅಲ್ಲಿಯ ನೆರವಾಗಲು ಜಾಗ ನಮಗೆ ಗೊತ್ತಿರುವುದಿಲ್ಲ. ಹಾಗಾಗಿ ಇಲ್ಲಿಂದ ಪರಿಹಾರ ಸಂಗ್ರಹಿಸಿ ಕಳಿಸಿಕೊಂಡುವಂತ ಕೆಲಸ ಮಾಡುತ್ತೇವೆಂದು ಸಂಸದ ಜೋಶಿ ಮೆಲ್ಲಗೆ ಜಾರಿಕೊಂಡರು

Leave a Reply

Your email address will not be published.

Social Media Auto Publish Powered By : XYZScripts.com