ನೆರೆ ಸಂತ್ರಸ್ತರಿಗೆ ಕಳಿಸುವ ಆಹಾರ ದುರುಪಯೋಗವಾಗುತ್ತಿರುವುದು ನಿಜ : ಸಾ ರಾ ಮಹೇಶ್​

ಮಡಿಕೇರಿ : ಪರಿಹಾರ ಕೇಂದ್ರಗಳಲ್ಲಿ ಆಹಾರ ಹಾಗೂ ಇತರೆ ಪದಾರ್ಥಗಳು ದುರಪಯೋಗವಾಗುತ್ತಿರುವುದು ಸತ್ಯವೆಂದು  ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್​ ತಿಳಿಸಿದ್ದಾರೆ.

ವಸ್ತುಗಳು ದುರುಪಯೋಗವಾಗುತ್ತಿರುವ ಕುರಿತು ಮಾತನಾಡಿದ ಸಾ.ರಾ.ಮಹೇಶ್​,  ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೇಕಾದವರಿಗೆ ಪದಾರ್ಥಗಳನ್ನು ಹಂಚುತ್ತಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳು ದುರಪಯೋಗವಾಗುತ್ತಿರುವುದು ಸತ್ಯವೆಂದು ಮಾಹಿತಿ ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ, ಸಂತ್ರಸ್ತರಿಗೆ ತಲುಪಬೇಕಾದ ಯಾವುದೇ ವಸ್ತಗಳು ದುರುಪಯೋಗವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ, ಹಾಗೂ ಪ್ರವಾಹದಿಂದ ಜಿಲ್ಲೆ ಸಂಪೂರ್ಣ ನಾಶವಾಗಿದ್ದು, ಕೊಡಗನ್ನು ಸಹಜ ಸ್ಥಿತಿಗೆ ತರಲು ಎಲ್ಲಾರೂ ಯತ್ನಿಸುತ್ತಿದ್ದಾರೆ. ಇದಕ್ಕೆ 2ಸಾವಿರ ಕೋಟಿ ಖರ್ಚಾದರೂ ತೊಂದರೆಯಿಲ್ಲ, ನನ್ನ ಒಂದು ತಿಂಗಳ ಸಂಬಳ ಕೂಡ ನಾನು ನಿರಾಶ್ರಿತರಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com