ಕೊಡಗಿನ ಸಂತ್ರಸ್ತರಿಗೆ ನಿಮಿಷಾಂಬ ತಾಯಿಯ 1160 ಸೀರೆ, 4 ಸಾವಿರ ಚಪಾತಿ ರವಾನೆ…!

ಮಂಡ್ಯ :  ಮುಜರಾಯಿ ಇಲಾಖೆಯ ಆದೇಶದಂತೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಆಡಳಿತ ಮಂಡಳಿ ಕೊಡಗು ನಿರಾಶ್ರಿತರ ಸಹಾಯಕ್ಕೆ ಮುಂದಾಗಿದೆ. ಇಂದು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಸಂತ್ರಸ್ತರಿಗಾಗಿ ಸೀರೆ, ಆಹಾರ ಧಾನ್ಯಗಳನ್ನು ಕಳುಹಿಸಿದರು.

ನಿಮಿಷಾಂಭ ದೇವಿಗೆ ಭಕ್ತರು ಕಾಣಿಕೆ ನೀಡಿದ್ದ 1160 ಸೀರೆಗಳು, 30 ಕ್ವಿಂಟಾಲ್ ಅಕ್ಕಿಯನ್ನು ಸಂತ್ರಸ್ತರಿಗೆ ವಿತರಣೆ ಮಾಡಲು ಇಂದು ಕಳುಹಿಸಲಾಯಿತು. ಶಾಸಕ ರವೀಂದ್ರ ಶ್ರೀಕಂಠಯ್ಯ ಸೀರೆ ಹಾಗೂ ಅಕ್ಕಿ ತುಂಬಿದ್ದ ಟೆಂಪೋಗೆ ಚಾಲನೆ ನೀಡಿದರು. ಮತ್ತೊಂದು ಕಡೆ ಮಂಡ್ಯ ತಾಲ್ಲೂಕಿನ ಉಪ್ಪರಕನಹಳ್ಳಿ ಗ್ರಾಮಸ್ಥರು ಕೊಡಗಿನ ನಿರಾಶ್ರಿತರಿಗೆ ನಾಲ್ಕು ಸಾವಿರ ಚಪಾತಿಯನ್ನು ತಯಾರು ಮಾಡಿ ಕಳುಹಿಸಿಕೊಟ್ಟರು.

ಇಂದು ಗ್ರಾಮಸ್ಥರು ತಯಾರು ಮಾಡಿದ್ದ ಚಪಾತಿಯನ್ನು ಟೆಂಪೋ ಮೂಲಕ ಕೊಡಗು ಜಿಲ್ಲೆಗೆ ಕಳುಹಿಸಲಾಯಿತು‌. ಗ್ರಾಮದ ಕೆಲವು ಮುಖಂಡರು ಜೊತೆಯಲ್ಲಿ ತೆರಳಿದ್ದು, ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮಸ್ಥರು ತಾವು ಸಂಗ್ರಹ ಮಾಡಿದ 1.25 ಲಕ್ಷ ರೂಪಾಯಿ ನಗದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಜೊತೆಗೆ ದವಸ ಧಾನ್ಯಗಳು, ಬಟ್ಟೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಕೊಡಗು ಜಿಲ್ಲಾಡಳಿತಕ್ಕೆ ಕಳುಹಿಸಿಕೊಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com