ಕಲೀಮುಲ್ಲಾಹ್‍ರವರ ‘ಕ್ಲಾಸ್ ಟೀಚರ್’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ..

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2016ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಬರಹಗಾರ, ಉಪನ್ಯಾಸಕ ಕಲೀಮುಲ್ಲಾಹ್ ರವರ ‘ಕ್ಲಾಸ್ ಟೀಚರ್’ ಕೃತಿ ಆಯ್ಕೆಯಾಗಿದೆ.

ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕುವೆಂಪು ವಿ.ವಿ.ಯಲ್ಲಿ ಪಿ.ಹೆಚ್‍ಡಿ, ಎಂ.ಫಿಲ್ ಮಾಡಿರುವ ಕಲೀಮುಲ್ಲಾಹ್, ಕಳೆದ 22 ವರ್ಷಗಳಿಂದ ಶಿವಮೊಗ್ಗದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಯಲ್ಲಿದ್ದಾರೆ. ಇವರ ಅನೇಕ ಅಂಕಣ, ಲೇಖನ, ವರದಿ ಮತ್ತು ಪ್ರಬಂಧಗಳು ನಾಡಿನ ಹಲವು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.

ಕನ್ನಡ ಕಾವಲು ಪಡೆಯ ರಾಜ್ಯ ಮಟ್ಟದ ‘ಆದರ್ಶ ಶಿಕ್ಷಕ ಪ್ರಶಸ್ತಿ’ ಪುರಸ್ಕೃತ ಕಲೀಮುಲ್ಲಾಹ್‍ರವರ, ಅಂಕಿತ ಪ್ರಕಾಶನ ಪ್ರಕಟಿಸಿರುವ ‘ಕ್ಲಾಸ್ ಟೀಚರ್’ ಕೃತಿಯ ಭಾಗವಾದ ‘ಅಪ್ಪನ ಪ್ರೀತಿ’ ಪ್ರಬಂಧವು ವಿಜಯಪುರದ ಅಕ್ಕಮಹಾದೇವಿ ವಿ.ವಿ.ಯ ಬಿಕಾಂ ಮತ್ತು ಬಿಬಿಎಂ ಪದವಿಗೆ ಪಠ್ಯವಾಗಿದೆ.

ಪ್ರಶಸ್ತಿಯು ರೂ.10000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಅಕ್ಟೋಬರ್ 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com