Cricket : ವಿರಾಟ್ ಕೊಹ್ಲಿ 23ನೇ ಟೆಸ್ಟ್ ಶತಕ : ಗೆಲುವಿನ ಕನಸಲ್ಲಿ ಟೀಮ್ ಇಂಡಿಯಾ

ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಕನಸು ಕಾಣುತ್ತಿದೆ. ಗೆಲ್ಲಲು 522 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿರುವ ಆತಿಥೇಯ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ. ಇಂಗ್ಲೆಂಡ್ ಗೆಲುವಿಗೆ ಇನ್ನೂ 498 ರನ್ನುಗಳ ಅಗತ್ಯವಿದ್ದು, ಭಾರತ ಜಯಿಸಲು 10 ವಿಕೆಟ್ ಉರುಳಿಸಬೇಕಿದೆ.

ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಮೊತ್ತ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ವಿರಾಟ್ ಕೊಹ್ಲಿ 23ನೇ ಟೆಸ್ಟ್ ಶತಕ ಬಾರಿಸಿದರು. ತಾಳ್ಮಯ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 197 ಎಸೆತಗಳನ್ನು ಎದುರಿಸಿ 103 ರನ್ ಕಲೆಹಾಕಿದರು. ಅರ್ಧಶತಕ ಬಾರಿಸಿದ ಚೇತೇಶ್ವರ ಪೂಜಾರಾ 71 ಹಾಗೂ ಹಾರ್ದಿಕ್ ಪಾಂಡ್ಯ ಅಜೇಯ 52 ರನ್ ಗಳಿಸಿದರು.

ಇಂಗ್ಲೆಂಡ್ ಪರವಾಗಿ ಆದಿಲ್ ರಾಶಿದ್ 3 ಹಾಗೂ ಬೆನ್ ಸ್ಟೋಕ್ಸ್ 2 ವಿಕೆಟ್ ಪಡೆದರು.

 

 

Leave a Reply

Your email address will not be published.

Social Media Auto Publish Powered By : XYZScripts.com