Asian Games : ಶೂಟಿಂಗ್ : ಚಿನ್ನ ಗೆದ್ದ 16 ವರ್ಷದ ಸೌರಭ್ ಚೌಧರಿ : ಅಭಿಷೇಕ್ ಗೆ ಕಂಚು

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಸೌರಭ್ ಚೌಧರಿ ಚಿನ್ನದ ಪದಕ ಜಯಿಸಿದ್ದಾರೆ. ಮಂಗಳವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದ ಸ್ಪರ್ಧೆಯಲ್ಲಿ 240.7 ಪಾಯಿಂಟ್ಸ್ ಗಳಿಸಿದ 16 ವರ್ಷ ವಯಸ್ಸಿನ ಸೌರಭ್ ಚೌಧರಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಶೂಟರ್ ಅಭಿಷೇಕ ವರ್ಮಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 219.3 ಪಾಯಿಂಟ್ ಗಳನ್ನು ಗಳಿಸಿದ ಅಭಿಷೇಕ್ ವರ್ಮಾ ಮೂರನೇ ಸ್ಥಾನ ಪಡೆದರು. ಜಪಾನ್ ದೇಶದ ಶೂಟರ್ ತೊಮೊಯುಕಿ ಮತಸುದಾ 239.7 ಪಾಯಿಂಟ್ ಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

 

Leave a Reply

Your email address will not be published.

Social Media Auto Publish Powered By : XYZScripts.com