WATCH : ಕೊಡಗು ಪ್ರವಾಹ : ಹುಟ್ಟುಹಬ್ಬ ಆಚರಿಸಿಕೊಳ್ಳದ ಡಾಲಿ ಧನಂಜಯ್​..!

ಬೆಂಗಳೂರು :  ಟಗರು ಖ್ಯಾತಿಯ ಧನಂಜಯ್​ ಅಲಿಯಾಸ್​ ಡಾಲಿ ಹುಟ್ಟುಹಬ್ಬ ಇದೇ ತಿಂಗಳ 23ರಂದು ಇದ್ದು, ಅಭಿಮಾನಿಗಳು ಧನಂಜಯ್​ ಹುಟ್ಟುಹಬ್ಬವನ್ನು ಡಾಲಿ ಡೇ ಎಂದು ಆಚರಿಸಲು ಮುಂದಾಗಿದ್ದಾರೆ. ಆದರೆ ಇದನ್ನು ಧನಂಜಯ್​ ತಿರಸ್ಕರಿಸಿದ್ದಾರೆ.
ಹೌದು ಇದೇ ತಿಂಗಳ 23ರಂದು ಧನಂಜಯ್​ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಡೇ ಎಂದು ಆಚರಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಆದ್ರೆ ಧನಂಜಯ್​ ಈ ಸಂಭ್ರವನ್ನು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾರಣ ಏನು ಎಂದರೆ, ಕೊಡಗು, ಹಾಗೂ ಕೇರಳದ ಜನರು ಭಾರೀ ಮಳೆಯಿಂದ ಪ್ರವಾಹ ಬಂದು ಎಲ್ಲರು ಮನೆ ಆಸ್ತಿಯನ್ನು ಕಳೆದುಕೊಂಡಿದ್ದಾರೆ ಈ ಸಮಯದಲ್ಲಿ ಸಂಭ್ರಮಾಚಾರಣೆ ಬೇಡ ಎಂದು ಧನಂಜಯ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇದು ಸಂಭ್ರಮಿಸುವ ಸಮಯವಲ್ಲ, ಸಹಾಯ ಮಾಡುವ ಸಮಯ, ಕೈ ಜೋಡಿಸಿ, ಅರ್ಥಪೂರ್ಣವಾದ ಹುಟ್ಟು ಹಬ್ಬವನ್ನು ಆಚರಿಸೋಣ.

Dhananjaya यांनी वर पोस्ट केले सोमवार, २० ऑगस्ट, २०१८

ಧನಂಜಯ್​ ತಾವೇ ಸ್ವತಃ ತಮ್ಮ ಫೇಸ್​ ಬುಕ್​ನಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಧನಂಜಯ್,
ಕೊಡಗಿನ ಜನತೆ ಭಾರೀ ಮಳೆಯಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಮ್ಮವರು ಕಷ್ಟದಲ್ಲಿದರೇ ನಾವು ಖುಷಿ ಪಡುವುದು ಎಷ್ಟು ಸರಿ ಎಂದು ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಅಲ್ಲಿನ  ಜನರಿಗೆ ಕೊಡೋಣ ಅವರಿಗೆ ಸಹಾಯವಾಗುತ್ತದೆ, ಇಂತಹ ಸಮಯದಲ್ಲಿ ನಾನು ಸಂಭ್ರಮಿಸುವುದು ಸರಿಯಲ್ಲ ಎಂದು ಯೋಚಿಸಿ ತಮ್ಮ ಹುಟ್ಟುಹಬ್ಬವನ್ನ ಸೆಲೆಬ್ರೆಟ್ ಮಾಡದಿರಲು ನಿರ್ಧರಿಸಿದ್ದಾರೆ.

ಆದ್ರೆ, ಅಭಿಮಾನಿಗಳನ್ನ ನಿರಾಸೆ ಮಾಡಲು ಇಷ್ಟವಿಲ್ಲದ ಧನಂಜಯ್, ಆ ದಿನ ನಿಮ್ಮನ್ನ ಭೇಟಿ ಮಾಡುತ್ತೇನೆ. ಯಾವುದೇ ಕೇಕ್, ಪಟಾಕಿ, ಕಟೌಟ್ ಗಳನ್ನ ಹಾಕುವುದು ಬೇಡ. ಕೊಡಗು ಜನರ ಕ್ಷೇಮಾಭಿವೃದ್ಧಿಗಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಆ ದಿನ ಅವರಿಗೆ ನೆರವಾಗೋಣ ಎಂದು ಕರೆ ಕೊಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com