ಭೂ ಕುಸಿತದಿಂದ ಕಾಫಿ ಬೆಳೆ ನಾಶ : ಕೊಡಗಿನ ಸಂತ್ರಸ್ತ ಮಕ್ಕಳ ಶಿಕ್ಷಣಕ್ಕೆ ಜಿಲ್ಲಾಡಳಿತ ಅವಕಾಶ

ಚಿಕ್ಕಮಗಳೂರು : ಮಲೆನಾಡಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿದ್ದು, ಕಾಫಿ ತೋಟದಲ್ಲಿ ಭಾರೀ ಭೂ ಕುಸಿತವಾಗಿದೆ. ಕಳೆದ ವಾರದಿಂದ ಕೊಪ್ಪ ತಾಲೂಕಿನಲ್ಲಿ ಅಲ್ಲಲ್ಲಿ ಭೂ ಕುಸಿತವಾಗುತ್ತಿದ್ದು, ಭೂಕುಸಿತದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.

ಮಹಾಮಳೆಗೆ ಭೂಕುಸಿತವಾಗುತ್ತಿದ್ದು, ಕಾಫಿ ಟೀ ಬೆಳೆ ನಾಶವಾಗಿದೆ. ಬೃಹಧಾರಾಕಾರದಲ್ಲಿ ಭಾರಿ ಭೂ ಕುಸಿತದಿಂದ ಅರ್ಧ ಎಕರೆ ಪ್ರದೇಶದಲ್ಲಿ, ಸುಮಾರು 30 ಅಡಿ ಆಳಕ್ಕೆ ಮಣ್ಣು ಕುಸಿದಿರುವ ಘಟನೆ ಕೊಪ್ಪ ತಾಲೂಕಿನ ಭೂತನಕಾಡು ಸಮೀಪದ ಮೈಸೂರು ಪ್ಲಾಂಟೇಷನ್ ನಲ್ಲಿ ನಡೆದಿದೆ.

ಮಂಗಳೂರು : ಕೊಡಗಿನ ನೆರೆಯ ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ ಭಾಗ್ಯ ಒದಗಿಸಿದ್ದು, ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ನೂರಾರು ಸಂತ್ರಸ್ತ ಮಕ್ಕಳಿಗೆ ಸುಳ್ಯದಲ್ಲಿ ಶಿಕ್ಷಣಕ್ಕೆ ಜಿಲ್ಲಾಡಳಿತ ಅವಕಾಶ ಕೊಟ್ಟಿದೆ. ಪರಿಹಾರ ಕೇಂದ್ರಗಳಲ್ಲಿ ಮಕ್ಕಳ ದಾಖಲಾತಿಗಳನ್ನು ನಮೂದಿಸುತ್ತಿರುವ ಅಧಿಕಾರಿಗಳು, ಹಾಜರಾತಿ ಪಡೆದು ಶಾಲೆಗಳಿಗೆ ಕಳುಹಿಸಲು ಸಿದ್ಧತೆ. ಅರಂತೋಡು ಪರಿಹಾರ ಕೇಂದ್ರದ ನಲವತ್ತಾರು ವಿದ್ಯಾರ್ಥಿಗಳು ಸೇರಿದಂತೆ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಜಿಲ್ಲಾಡಳಿತ ಅವಕಾಸ ಕಲ್ಪಿಸಿದೆ. ಇಂದಿನಿಂದಲೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಆರಂಭವಾಗಿದ್ದು, ಸುಳ್ಯ ತಾಲೂಕಿನಲ್ಲಿರುವ ನಾಲ್ಕು ಪರಿಹಾರ ಕೇಂದ್ರದ ವಿದ್ಯಾರ್ಥಿಗಳಿಗೂ ಶಿಕ್ಷಣಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ.

Leave a Reply

Your email address will not be published.