KPL 2018 : ಬಳ್ಳಾರಿ ವಿರುದ್ಧ ಮೈಸೂರು ವಾರಿಯರ್ಸ್ ಗೆ ಭರ್ಜರಿ ಜಯ : ಮಿಂಚಿದ ವೈಶಾಕ್

ಹುಬ್ಬಳ್ಳಿಯ ಕೆಎಸ್ ಸಿಎ ರಾಜ್ ನಗರ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ನ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ವಿರುದ್ಧ ಮೈಸೂರು ವಾರಿಯರ್ಸ್ 7 ವಿಕೆಟ್ ಜಯ ಸಾಧಿಸಿದೆ.

ಟಾಸ್ ಗೆದ್ದ ಮೈಸೂರು ವಾರಿಯರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ಬಳ್ಳಾರಿ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಮೊತ್ತ ದಾಖಲಿಸಿತು. ವಾರಿಯರ್ಸ್ ತಂಡದ ಬೌಲರ್ ವೈಶಾಕ್ 4 ವಿಕೆಟ್ ಪಡೆದು ಮಿಂಚಿದರು.

ಗುರಿಯನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ 18.5 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 147 ರನ್ ಸೇರಿಸಿ ಗೆಲುವು ದಾಖಲಿಸಿತು. ಅಮಿತ್ ವರ್ಮಾ 59 ಹಾಗೂ ರಾಜೂ ಭಟ್ಕಳ್ 48 ರನ್ ಬಾರಿಸಿ ಗೆಲುವಿಗೆ ನೆರವಾದರು.

Leave a Reply

Your email address will not be published.

Social Media Auto Publish Powered By : XYZScripts.com