Asian Games : ಕುಸ್ತಿಯಲ್ಲಿ ಚಿನ್ನ ಗೆದ್ದ ವಿನೇಶ್ ಫೋಗಟ್ : ದಂಗಲ್ ನಟ ಅಮೀರ್ ಮೆಚ್ಚುಗೆ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ವಿನೇಶ್ ಫೋಗಟ್ ಚಿನ್ನದ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ವಿನೇಶ್ ಫೋಗಟ್ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಕೆಜಿ ವಿಭಾಗ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನ ಮೊದಲ ಭಾರತೀಯ ಕುಸ್ತಿ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಧನೆಗೈದ ವಿನೇಶ್ ಫೋಗಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ವಿನೇಶ್ ಫೋಗಟ್ ಸಾಧನೆಯ ಬಗ್ಗೆ ಬಾಲಿವುಡ್ ನಟ ಅಮೀರ್ ಖಾನ್ ಟ್ವೀಟ್ ಮಾಡುವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿರುವುದಕ್ಕೆ ಅಭಿನಂದನೆಗಳು ವಿನೇಶ್. ನಿನ್ನ ಬಗ್ಗೆ ಹೆಮ್ಮೆಯೆನಿಸುತ್ತದೆ ‘ ಎಂದು ಟ್ವೀಟ್ ಮಾಡಿದ್ದಾರೆ.

ಸೂಪರ್ ಹಿಟ್ ದಂಗಲ್ ಚಿತ್ರದ ಪ್ರಸಿದ್ಧ ಡೈಲಾಗ್ ಆಗಿರುವ ‘ಮಾರಿ ಛೋರಿಯಾನ್ ಕಿಸೀಸೆ ಕಮ್ ಹೈ ಕೇ’ (ನಮ್ಮ ಹುಡುಗಿಯರು ಹುಡುಗರಿಗಿಂತ ಕಡಿಮೆ ಇದ್ದಾರೆಯೇ..?) ‘ ಎಂದು ಕೇಳಿ ಟ್ವೀಟ್ ಮಾಡಿದ್ದಾರೆ.

 

2 thoughts on “Asian Games : ಕುಸ್ತಿಯಲ್ಲಿ ಚಿನ್ನ ಗೆದ್ದ ವಿನೇಶ್ ಫೋಗಟ್ : ದಂಗಲ್ ನಟ ಅಮೀರ್ ಮೆಚ್ಚುಗೆ

Leave a Reply

Your email address will not be published.

Social Media Auto Publish Powered By : XYZScripts.com