ಕೇರಳ ಸಂತೃಸ್ತರ ನೆರವಿಗೆ ಧಾವಿಸಿದ ಬಾಲಿವುಡ್​ ನಟಿ ಸನ್ನಿ ಲಿಯೋನ್​…!

ಕೇರಳ : ಮಹಾಮಳೆಗೆ ಕೇರಳ ಜನತೆ ತತ್ತರಿಸಿಹೊಗಿದ್ದು, ದೇವರನಾಡಿನ ನೆರವಿಗೆ  ಬಾಲಿವುಡ್‍ನ ಮಾದಕ ಬೆಡಗಿ ಸನ್ನಿ ಲಿಯೋನ್ ಪರಿಹಾರ ನಿಧಿಗೆ 5 ಕೋಟಿ ರೂ. ನೀಡಿದ್ದಾರೆ ಎಂದು ತಿಳಿದುಬಂದಿದೆ.

ಶತಮಾನದ ಭೀಕರ ಪ್ರವಾಹಕ್ಕೆ ದೇವರನಾಡು ಕೇರಳ, ಹಾಗೂ ಮಂಜಿನ ನಗರಿ ಕೊಡಗು ಅಕ್ಷರಶಃ ನಲುಗಿಹೋಗಿದ್ದು, ಹಲವರು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಬಹುತೇಕ ನಿವಾಸಿಗಳು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪ್ರವಾಹ ಪರಿಹಾರ ನಿಧಿಗೆ ಸನ್ನಿ ಲಿಯೋನ್ 5 ಕೋಟಿ ರೂ. ನೀಡಿದ್ದಾರೆ. ಸನ್ನಿ ಲಿಯೋನ್ ಸಹಾಯದ ಬಗ್ಗೆ ಮಲೆಯಾಳಂ ನಿರ್ದೇಶಕ, ಬರಹಗಾರರಾದ ಅಜಯ್ ದೇವಲೋಕ ಪ್ರತಿಕ್ರಿಯಿಸಿ ಸನ್ನಿ ಲಿಯೋನ್‍ಗೆ ಧನ್ಯವಾದ ತಿಳಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸನ್ನಿ ಲಿಯೋನ್ ನಿಮಗೆ ತುಂಬಾ ಧನ್ಯವಾದಗಳು. ನಮ್ಮ ಕಷ್ಟದ ಸಮಯದಲ್ಲಿ ನೀವು ನೀಡಿದ ಈ ಕೊಡುಗೆಯನ್ನು ಕೇರಳಿಗರು ಎಂದಿಗೂ ಮರೆಯುವುದಿಲ್ಲ. ನಾನು ಈ ಸಮಯದಲ್ಲಿ ನಿಮಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ನನ್ನ ಸ್ನೇಹಿತರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಸಂತ್ರಸ್ತರಿಗೆ ಸಾಕಷ್ಟು ಜನ ಪ್ರವಾಹ ಪರಿಹಾರ ನಿಧಿಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದು ಫೇಸ್​ ಬುಕ್​ ನಲ್ಲಿ ಪೋಸ್ಟ್​ ಮಾಡಿ ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published.