ಕೊಡಗು ಸಂತ್ರಸ್ತರ ಆರೈಕೆಯಲ್ಲಿ ಸರ್ಕಾರ ವಿಫಲವಾಗಿದೆ : ಶೋಭಾ ಕರಂದ್ಲಾಜೆ

ಬೆಂಗಳೂರು : ಭಾರೀ ಮಳೆಯಿಂದ ಕೊಡಗು ಮಂದಿ ಕಂಗಲಾಗಿದ್ದಾರೆ,  ಸಾವಿರಾರು ಜನ ಮನೆ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ತ್ವರಿತವಾಗಿ ಪರಿಹಾರ ಕಾಮಗಾರಿ ಮಾಡಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಶೋಭಾ, ರಾಜ್ಯ ಸರ್ಕಾರದ ಪರಿಹಾರ ಕಾಮಗಾರಿ ನಿಧಾನಗತಿಯಲ್ಲಿ ನಡೀತಿದೆ. 5500 ಸ್ಯಾನಿಟರಿ ಪ್ಯಾಡ್,  1700 ಟೂಥ್ ಪೇಸ್ಟ್,  1300 ಪ್ಯಾಕೆಟ್ ಬಿಸ್ಕಟ್ಸ್,  300 ಹೊದಿಕೆ,  ಸಾವಿರಾರು ಬಟ್ಟೆಗಳು ಹಾಗೂ ಅಕ್ಕಿಯನ್ನು ಕಳುಹಿಸುತ್ತಿದ್ದೇವೆ. ಇಂದು ಕೊಡಗಿಗೆ ಇವೆಲ್ಲವನ್ನೂ ತಲುಪಿಸುತ್ತಿದ್ದೇವೆ ಎಂದು ಶೋಭಾ ತಿಳಿಸಿದ್ದಾರೆ.

ಕೊಡಗಿನ ಸಂತ್ರಸ್ತರಿಗೆ ‌ಪರಿಹಾರ ಸಾಮಾಗ್ರಿಗಳನ್ನು ಮಲ್ಲೇಶ್ವರಂನ ಬಿಜೆಪಿ ಕಚೇರಿಯಿಂದ ರವಾನೆ ಮಾಡಲಾಗಿದ್ದು, ಸಾಮಾಗ್ರಿಯೊಂದಿಗೆ ಹೊರಟಿದ್ದ ವಾಹನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಸಿರು ‌ನಿಶಾನೆ ತೋರಿದರು.

Leave a Reply

Your email address will not be published.

Social Media Auto Publish Powered By : XYZScripts.com