ಕೊಡಗು, ಕೇರಳಿಗರಿಗೆ ಚಿತ್ರರಂಗದಿಂದ ಧನಸಹಾಯ..! ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​ ?

ಬೆಂಗಳೂರಿಗೆ : ಮಹಾಮಳೆಗೆ ಮಂಜಿನ ನಗರಿ ಕೊಡಗು ದೇವರನಾಡು ಕೇರಳ ಜನತೆ ನಲುಗಿಹೋಗಿದ್ದು,  ರಾಜ್ಯಾದ್ಯಂತ ಕೊಡಗಿನ ಜನರಿಗೆ ಬಟ್ಟೆ, ಔಷಧ, ಆಹಾರ ಸೇರಿದಂತೆ ಧನಸಹಾಯದ ಮಹಾಪೂರವೇ ಕೊಡಗಿನತ್ತ ಹೋಗುತ್ತಿದೆ.ಅಷ್ಟಲ್ಲದೇ ಜನರಿಗೆ ಸಹಾಯ ಮಾಡುವವರು ಸಿಎಂ ಅಕೌಂಟಗೆ  ಹಣವನ್ನು ಹಾಕುತ್ತಿದ್ದು, ಇನ್ನ ಕೇರಳಿಗರು ಹಾಗೂ ಕೊಡಗಿನ ಜನಕ್ಕೆ ಚಿತ್ರರಂಗದವರು ನಟ, ನಟಿಯರು ನೀಡುತ್ತಿದ್ದಾರೆ.

ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.ಬಹುಭಾಷಾ ನಟ ಪ್ರಕಾಶ್ ರೈ ಕೊಡಗು ಜನತೆ 5ಲಕ್ಷ ಹಣದ ನೆರವು ನೀಡಿದ್ದಾರೆ.

ಪ್ರವಾಹ ಪೀಡಿತರಿಗೆ ರಾಕಿಂಗ್ ಸ್ಟಾರ್ ಯಶ್ ಸಹಾಯ ಹಸ್ತ ಚಾಚಿದ್ದಾರೆ. ‘ಯಶೋಮಾರ್ಗ’ ಮೂಲಕ ಕೊಡಗಿನ ಸುಂಟಿಕೊಪ್ಪದಲ್ಲಿರುವ ಸಂತ್ರಸ್ತರಿಗೆ ನಟ ಯಶ್ ನೆರವು ನೀಡಿದ್ದಾರೆ. ಜಗ್ಗೇಶ್​ ಹಾಗೂ ಸಂಯುಕ್ತ ಹೆಗ್ಡೆ ಜನರಿಗೆ ಬೇಕಾದ ವಸ್ತುವನ್ನು ಕಳುಹಿಸಿಕೊಟ್ಟಿದ್ದಾರೆ.ಇನ್ನ ಚಂದನ್ ಶೆಟ್ಟಿ ಕೊಡಗಿಗೆ ಹೋಗಿ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ನೀಡಿ ಅವರ ಕಷ್ಟವನ್ನು ಆಲಿಸಿ ಸಂತ್ವಾನ ಹೇಳಿದ್ದಾರೆ.

 

ಮನೆ, ಆಸ್ತಿ,ವಾಹನ, ಇರುವುದೆಲ್ಲವ ಕಳೆದುಕೊಂಡ ಜನರಿಗೆ ಇಡೀ ಚಿತ್ರರಂಗವೇ ಸಹಾಯ ಹಸ್ತ ನೀಡಿದೆ. ದಕ್ಷಿಣ ಭಾರತದಲ್ಲಿ ಅಲ್ಲು ಅರ್ಜುನ್ 25 ಲಕ್ಷ,  ಕಾರ್ತಿ ಹಾಗೂ ಸೂರ್ಯ ತಲಾ 25 ಲಕ್ಷ, ಮೋಹನ್ ಲಾಲ್ 25, ಕಮಲ್ ಹಾಸನ್ 25 ಲಕ್ಷ, ನಾಗಾರ್ಜುನ 28 ಲಕ್ಷ, ಮಹೇಶ್ ಬಾಬು 25 ಲಕ್ಷ, ಪ್ರಭಾಸ್ 25 ಲಕ್ಷ, ಎನ್.ಟಿ.ಆರ್ 25 ಲಕ್ಷ, ಚಿರಂಜೀವಿ 25 ಲಕ್ಷ, ರಾಮ್ ಚರಣ್ ಮತ್ತು ಪತ್ನಿ ಸೇರಿ 35 ಲಕ್ಷ, ಕಲ್ಯಾಣ್ ರಾಮ್ 10 ಲಕ್ಷ ಸೇರಿದಂತೆ ಸಾಕಷ್ಟು ನಟರು ಕೇರಳ ಜನರಿಗೆ ನೆರವು ನೀಡಿದ್ದಾರೆ. ಬಾಲಿವುಡ್​ ಬೆಡಗಿ ಸನ್ನಿಲಿಯೋನ್​ ಬರೊಬ್ಬರಿ 5 ಕೋಟಿ ಹಣವನ್ನು ನೀಡಿದ್ದಾರೆ.  ಕನ್ನಡ ಸಿನಿಮಾ ನಟರು ಹಾಗೂ ಅವರ ಅಭಿಮಾನಿ ಸಂಘಗಳು ಕೂಡ ಮಲೆನಾಡಿನ ಮಕ್ಕಳ ಸಹಾಯಕ್ಕೆ ನಿಂತಿದ್ದಾರೆ.

ಇತ್ತ ಉಪೇಂದ್ರ ಮತ್ತು ಕ್ರೇಜಿಸ್ಟಾರ್​ ರವಿಚಂದ್ರನ್​ ಉತ್ತಮ ಸಂದೇಶವನ್ನು ನೀಡಿದ್ದಾರೆ, ನಾವು ಸರ್ಕಾರ ಕೊಡುತ್ತದೆ ಎಂದು ಕಾಯುವುದು ಬೇಡ ನಮ್ಮ ಕೈಲಾದಷ್ಟು ಸಹಾಯ ಸಹಾಯ ಮಾಡೋಣ ಸರ್ಕಾರ ಸರ್ಕಾರ ಮಾಡಬೇಕಾದ ಕೆಲಸ ಸರ್ಕಾರ ಮಾಡುತ್ತದೆ ಎಂದು ರವಿಚಂದ್ರನ್​ ಹೇಳಿದ್ದಾರೆ.

ಚಂದನ್ ಶೆಟ್ಟಿ ಕೂಡ ಕೊಡಗಿನ ಜನತೆಗೆ ಸಹಾಯ ಹಸ್ತ ನೀಡಿದ್ದು, ಈಗಾಗಲೇ ಕೈಲಾದಷ್ಟು ಆಹಾರ ಸಾಮಾಗ್ರಿಗಳನ್ನು ಜನತೆಗೆ ತಲುಪಿಸಿ ಸ್ವತಃ ನಿರಾಶ್ರಿತರ ಬಳಿ ಹೋಗಿ ಅವರ ಕಷ್ಟಗಳನ್ನು ಆಲಿಸಿದ್ದಾರೆ. ಈ ವೇಳೆ ಮಾಧ್ಯಮದವರ ಬಳಿ ಮಾತನಾಡಿದ ಚಂದನ್, ಒಕ್ಕಲಿಗರ ಸಮಾಜ ಭವನದಲ್ಲಿ ಸಾಕಷ್ಟು ನಿರಾಶ್ರಿತರಿಗೆ ಇರೋದಕ್ಕೆ ಅವಕಾಶ ನೀಡಲಾಗಿದೆ. ಸುಮಾರು ಕಡೆಗಳಿಂದ ದಾಸ್ತಾನು ಪದಾರ್ಥಗಳು, ತಿಂಡಿ, ತಿನಿಸುಗಳು, ಹೊದಿಕೆ, ಔಷಧಿ ಮತ್ತು ಅಗತ್ಯ ವಸ್ತುಗಳು ಬಂದಿವೆ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com