ಅದ್ದೂರಿಯಾಗಿ ನಡೆದ ಗೂಗ್ಲಿ ನಿರ್ದೇಶಕನ ವಿವಾಹ : ಅಪೇಕ್ಷಾರನ್ನ ಕೈ ಹಿಡಿದ ಪವನ್..!

ಬಾಗಲಕೋಟೆ :  ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಇಂದು ದಾಂಪತ್ಯ ಜೀವನಕ್ಕೆ ಲಗ್ಗೆ ಇಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಇಂದು  ಅಪೇಕ್ಷಾ ಪುರೋಹಿತ್​ರನ್ನು ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯಲ್ಲಿ ನಡೆದಿತ್ತು. ಅಪೇಕ್ಷಾ ಪುರೋಹಿತ್ ಮೂಲತಃ ಬಾಗಲಕೋಟೆಯವರಾಗಿದ್ದು, ಅಲ್ಲಿಯ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ಸಹ ಜರುಗಿದೆ. ಇಂದು ಬೆಳಗ್ಗೆ 9.05 ಶುಭ ಮುಹೂರ್ತದಲ್ಲಿ ಅಪೇಕ್ಷಾ ಕೊರಳಿಗೆ ಪವನ್ ತಾಳಿ ಕಟ್ಟಿದ್ದಾರೆ.

ಕಿರಿತೆರೆ ಮೇಲೆ ಮಿಂಚುತ್ತಿದ್ದ ಅಪೇಕ್ಷಾ ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇಂದು ಬಾಗಲಕೊಟೆಯ ವಿದ್ಯಾಗಿರಿಯಲ್ಲಿನ ಕಲ್ಯಾಣ ಮಂಟಪದಲ್ಲಿ  ಬ್ರಾಹ್ಮಣ ಸಂಪ್ರದಾಯದಂತೆ ಪವನ್ ಮತ್ತು ಅಪೇಕ್ಷ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com