ಕೊಡಗು : ಸಹಾಯ ಮಾಡಲು ಬಂದ ಪ್ರಜ್ವಲ್ ರೇವಣ್ಣಗೆ ಗ್ರಾಮಸ್ಥರಿಂದ ತರಾಟೆ…?

ಕೊಡಗು : ಕೊಡಗಿನಲ್ಲಿ ಮಳೆಯಿಂದ ತತ್ತರಿಸಿರುವ ಜನರನ್ನು ವಿಚಾರಿಸಲು ಹೋಗಿದ್ದ ಪ್ರಜ್ವಲ್​ ರೇವಣ್ಣಗೆ  ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಾದಾಪುರದಲ್ಲಿ ಪ್ರಜ್ವಲ್‌ ರೇವಣ್ಣ ಪರಿಹಾರ ಸಾಮಾಗ್ರಿ ವಿತರಿಸಲು ಬಂದಿದ್ದರು. ಆದ್ರೆ, ಪರಿಹಾರ ಸಾಮಾಗ್ರಿ ತುಂಬಿಕೊಂಡು ಬಂದಿದ್ದ ವಾಹನಗಳ ಮೇಲೆ ಬ್ಯಾನರ್‌ಗಳನ್ನ ಅಳವಡಿಸಲಾಗಿತ್ತು. ಬ್ಯಾನರ್‌ ಮೇಲೆ ಪ್ರಜ್ವಲ್‌ ರೇವಣ್ಣ ಬಣ, ಪ್ರಜ್ವಲ್‌ ಯುವ ಬ್ರಿಗೇಡ್‌, ಜೆಡಿಎಸ್‌ ಕ್ಯಾಂಪ್‌ ಎಂದು ಬರೆಯಲಾಗಿತ್ತು. ಇದರಿಂದ ಕುಪಿತಗೊಂಡ ಜನರು ನಮಗೆ ಪರಿಹಾರ ವಿತರಿಸಲು ಬಂದಿದ್ದು ಸರಿ. ಆದ್ರೆ, ಬ್ಯಾನರ್‌ಗಳನ್ನ ಅಳವಡಿಸಿಕೊಂಡು ಬಂದಿದ್ದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜ್ವಲ್‌ ರೇವಣ್ಣ ತಂದಿದ್ದ ಸಾಮಾಗ್ರಿಗಳನ್ನ ಪಡೆಯಲು ನಿರಾಕರಿಸಿದರು. ಈ ವೇಳೆ ಅಲ್ಲಿಯೇ ಉಪಸ್ಥಿತರಿದ್ದ ಶಾಸಕ ಅಪ್ಪಚ್ಚು ರಂಜನ್‌ ಪರಿಹಾರ ಸಾಮಾಗ್ರಿಗಳನ್ನ ಪಡೆಯುವಂತೆ ಜನರಲ್ಲಿ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಪ್ರಜ್ವಲ್ ರೇವಣ್ಣ ತಂದಿದ್ದ ಸಾಮಾಗ್ರಿಗಳನ್ನ ಪಡೆಯಲು ಸುತರಾಂ ಜನರು ಒಪ್ಪಲೇ ಇಲ್ಲ. ಗ್ರಾಮಸ್ಥರ ಕೋಪ ತಣ್ಣಗಾಗುವುದಿಲ್ಲ ಎಂದು ಅರಿತ ಪ್ರಜ್ವಲ್‌ ರೇವಣ್ಣ ತಮ್ಮ ಸಾಮಾಗ್ರಿಗಳ ಸಮೇತ ವಾಪಸ್ ಆದರು.

Leave a Reply

Your email address will not be published.