20ನೇ ವಸಂತಕ್ಕೆ ಕಾಲಿಟ್ಟ ಬಯಲು ಗ್ರಂಥಾಲಯ – ರಾಜ್ಯದ ಇತರೆಡೆಗೂ ವಿಸ್ತರಣೆ

ಕಲಬುರ್ಗಿ ನಗರದಲ್ಲೊಂದು ವಿಶಿಷ್ಟ ಲೈಬ್ರರಿ ಇದೆ. ಇದರ ಸುತ್ತ ಗೋಡೆಗಳಿಲ್ಲ. ಕಪಾಟುಗಳೂ ಇಲ್ಲ. ಬಯಲಿನಲ್ಲಿಯೇ ಇರುವ ಈ ಗ್ರಂಥಾಲಯದ ಉದ್ಯಾನವನಕ್ಕೆ ಬರುವವರ ಆಕರ್ಷಣೆಯ ಕೇಂದ್ರಬಿಂದು. ಹಲವಾರು ಜನರಿಗೆ ದಾರಿದೀಪವಾಗಿರೋ ಈ ಬಯಲು ಗ್ರಂಥಾಲಯ 20ನೇ ವಸಂತಕ್ಕೆ ಕಾಲಿಟ್ಟಿದೆ. ರಾಜ್ಯದ ಇತರೆಡೆಗೂ ಬಯಲು ಗ್ರಂಥಾಲಯ ವಿಸ್ತರಣೆಗೊಳ್ಳಲಾರಂಭಿಸಿದೆ.

ಗ್ರಂಥಾಲಯಗಳು ಜ್ಞಾನದ ವಿಸ್ತಾರ ಕೇಂದ್ರಗಳು. ವಿಶ್ವದಲ್ಲಿ ಗ್ರಂಥಾಲಯಗಳಿಗೆ ತನ್ನದೇ ಆದ ಮಹತ್ವವಿದೆ. ಮ್ಯಾಗ್ಝಿನ್, ಪತ್ರಿಕೆಗಳಿಂದ ಹಿಡಿದು ಎಲ್ಲ ಮಾದರಿಯ ಪುಸ್ತಗಳು ಇಲ್ಲಿ ಸಿಗುತ್ತವೆ. ಗ್ರಂಥಾಲಯಗಳು ಜನಸಾಮಾನ್ಯರ ಆಪ್ತಮಿತ್ರನೆನಿಸಿಕೊಂಡಿವೆ. ವಿಶ್ವದಲ್ಲಿ ಅನೇಕ ಬಗೆಯ ಗ್ರಂಥಾಲಯಗಳನ್ನು ನೋಡುತ್ತೇವೆ. ಅವುಗಳ ಪೈಕಿ ವಿಭಿನ್ನ ಎನಿಸೋದು ಬಯಲು ಗ್ರಂಥಾಲಯ. ಹೊಸ ಪರಿಕಲ್ಪನೆಯೊಂದಿಗೆ ಕಲಬುರ್ಗಿಯಲ್ಲಿ ಅಸ್ತಿತ್ವಕ್ಕೆ ಬಂದ ಬಯಲು ಗ್ರಂಥಾಲಯಕ್ಕೆ ಇದೀಗ 20ರ ಪ್ರಾಯ. ಕಲಬುರ್ಗಿಯ ಸಾರ್ವಜನಿಕ ಉದ್ಯಾನವದಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಅದರ ರೂವಾರಿ ಹಿರಿಯ ಪತ್ರಕರ್ತ ಸುಭಾಷ್ ಬಣಕಾರ.

ಕಲಬುರ್ಗಿಯ ಸಾರ್ವಜನಿಕ ಉದ್ಯಾನವನದಲ್ಲಿ 2000 ರಲ್ಲಿ ಪ್ರಾರಂಬಿಸಲಾದ ಬಯಲು ಗ್ರಂಥಾಲಯ ಈಗ ಇಪ್ಪತ್ತನೆಯ ವಸಂತಕ್ಕೆ ಕಾಲಿಟ್ಟಿದೆ. ಹೊಸ ಪರಿಕಲ್ಪನೆಯೊಂದಿಗೆ ಸುಭಾಷ ಬಣಗಾರ ಇದನ್ನು ಆರಂಭಿಸಿದರು. ಮೂಲತಹ ಪತ್ರಕರ್ತರಾದ ಸುಭಾಷ್ ಬಣಗಾರ್ ಅವರು ಯಾವುದೇ ಸರ್ಕಾರದ ಅನುದಾನ ಪಡೆಯದೆ ಸ್ನೇಹಿತರು ಹಾಗೂ ಪರಿಚಯಸ್ಥರ ಸಹಾಯದಿಂದ ಈ ಗ್ರಂಥಾಲಯಕ್ಕೆ ಅಡಿಪಾಯ ಹಾಕಿದರು. ಅಂದಿನಿಂದ ಇಲ್ಲಿಯವರೆಗೆ ಅವರಿವರ ಸಹಾಯದಿಂದೆಲೆ ಬಯಲು ಗ್ರಂಥಾಲಯವನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಎನ್ನುತ್ತಾರೆ ಸುಭಾಷ್ ಬಣಕಾರ.

ಮೊಬೈಲ್, ಕಂಪ್ಯೂಟರ್, ಎಂದು ಸದಾ ಸಾಮಾಜಿಕ ಜಾಲತಾಣದಲ್ಲಿ ತೊಡಗಿರುವ ಯುವ ಸಮೂಹಕ್ಕೆ ಓದಿನಲ್ಲಿ ಪ್ರೋತ್ಸಾಹ ತುಂಬುವ ಹಾಗೂ ಓದಿನತ್ತ ಸೆಳೆಯುವ ವಿನೂತನ ಪ್ರಯತ್ನ ಸುಭಾಷ ಬಣಗಾರ್ ಮಾಡುತ್ತಿದ್ದಾರೆ. ಬೆಳಿಗ್ಗೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು, ಸಾಹಿತಿ, ಶಿಕ್ಷಕರು ಈ ಬಯಲು ಗ್ರಂಥಾಲಕ್ಕೆ ಬಂದು ದಿನ ಪತ್ರಿಕೆ, ನಿಯತಕಾಲಿಕೆ, ಪುಸ್ತಕಗಳು ಓದಲು ಪ್ರತಿನಿತ್ಯ ಇಲ್ಲಿಗೆ ಬರುತ್ತಾರೆ. ಸ್ವತಃ ಬಣಗಾರ್ ಅವರ ರಚಿಸಿದ ಪುಸ್ತಕಗಳೂ ಇಲ್ಲಿ ಓದಲು ದೊರೆಯುತ್ತವೆ. ಇದರ ಲಾಭ ಪಡೆದು ಕೆಲವರು, ಕೆ.ಎ.ಎಸ್., ಪಿ.ಎಸ್.ಐ. ಮತ್ತಿತರ ಸ್ಪರ್ಧಾ ಪರೀಕ್ಷೆಗಲ್ಲಿ ತೇರ್ಗಡೆಯಾಗಿ, ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಬಯಲು ಗ್ರಂಥಾಲಯದಿಂದ ಸಾಕಷ್ಟು ನೆರವಾಗಿದೆ ಎನ್ನುತ್ತಾರೆ ಕಲಬುರ್ಗಿ ನಾಗರೀಕ ಎಸ್.ಎಸ್.ಹಿರೇಮಠ.

19 ವರ್ಷ ಪೂರೈಸಿ 20ನೇ ವಸಂತಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಬಯಲು ಗ್ರಂಥಾಲಯದಲ್ಲಿ ಪುಟ್ಟ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚೆನ್ನಾರೆಡ್ಡಿ ಪಾಟೀಲ ಚಾಲನೆ ನೀಡಿದರು. ಕಾರ್ಯಕ್ರಮದ ಸಾನಿಧ್ಯತೆ ವಹಿಸಿಕೊಂಡಿದ್ದ ದಾವಣಗೆರೆಯ ವಿರಕ್ತಮಠದ ಬಸವಪ್ರಭು ಸ್ವಾಮೀಜಿಗಳು, ಮಾಧ್ಯಮ ಕ್ಷೇತರ್ದಲ್ಲಿ ಸಾಧನೆಗೈದವರನ್ನು ಸನ್ಮಾನಿದರು. ಹಿರಿಯ ಪತ್ರಕರ್ತರರಾದ ಪ್ರಭುಲಿಂಗ ನೀಲೂರೆ, ಶಿವರಾಮ ಅಸುಂಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಲಬುರ್ಗಿಯಲ್ಲಿ ಆರಂಭಗೊಂಡ ಬಯಲು ಗ್ರಂಥಾಲಯ ಇತರೆಡೆಗೂ ಹಂತ ಹಂತವಾಗಿ ವಿಸ್ತರಣೆಗೊಳ್ಳಲಾರಂಭಿಸಿದೆ. ಕಲಬುರ್ಗಿಯ ತಿಲಕ್ ನಗರದಲ್ಲಿಯೂ ಮತ್ತೊಂದು ಶಾಖೆ ಆರಂಭಿಸಲಾಗಿದೆ. ಇದರ ಜೊತೆಗೆ ಸುಭಾಷ್ ಬಣಕಾರ ಅವರೇ ದಾವಣಗೆಯ ವಿರಕ್ತಮಠದ ಆವರಣದಲ್ಲಿ ಬಯಲು ಗ್ರಂಥಾಲಯ ಆರಂಭಿಸಿ ಬಂದಿದ್ದಾರೆ. ಸುಭಾಷ್ ಬಣಕಾರರ ಕಾರ್ಯಕ್ಕೆ ಬೆನ್ನೆಲುಬಾಗಿ ಅವರ ಕುಟುಂಬ ನಿಂತಿದ್ದು, ಕಾರ್ಯಕ್ಕೆ ಶ್ಲಾಘನೆಯ ಮಹಾಪೂರ ಹರಿದು ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights